ಕಾಸರಗೋಡು: 79.3 ಗ್ರಾಂ ಅಫೀಮು ಮಾರಾಟಕ್ಕೆಂದು ಕೈ ವಶವಿರಿಸಿದ್ದ ಪ್ರಕರಣದ ಆರೋಪಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಲಾಗಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಕ್ಷನ್ ನ್ಯಾಯಾಲಯ (2) ಇದರ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮುಟ್ಟತ್ತೋಡಿ ಎರುಂದುಕಡವು ನಿವಾಸಿ ಸೈಯದ್ ಫ್ಯಾಸಿಸ್ಗೆ ಶಿಕ್ಷೆ ವಿಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಆರೋ ಪಿಯನ್ನು ಮಾದಕ ದ್ರವ್ಯಗಳ ಜೊತೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಾಸರ ಗೋಡು ಠಾಣೆ ಇನ್ಸ್ಪೆಕ್ಟರ್ ಸಿ.ಎ. ಅಬ್ದುಲ್ ರಹೀಮ್ ಪ್ರಕರಣದ ಆರಂಭಿಕ ತನಿಖೆ ನಡೆಸಿದರು. ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಅಂದಿನ ವಿದ್ಯಾನಗರ ಇನ್ಸ್ಪೆಕ್ಟರ್ ವಿ.ವಿ. ಮನೋಜ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಹೆಚ್ಚುವರಿ ಸರಕಾರಿ ವಕೀಲ ಚಂದ್ರಮೋಹನ್ ಜಿ ಮತ್ತು ನ್ಯಾಯವಾದಿ ಚಿತ್ರಕಲಾ ಹಾಜರಾದರು.
