ತಲಪಾಡಿ: ತಲಶ್ಶೇರಿಯ ದೌರ್ಜನ್ಯ ಪ್ರಕರಣದ ಆರೋಪಿ 25 ವರ್ಷದ ಬಳಿಕ ಮಂಗಳೂರಿನಲ್ಲಿ ಸೆರೆಯಾಗಿದ್ದಾನೆ. ತಲಶ್ಶೇರಿ ವಸತಿಗೃಹದಲ್ಲಿ ನಡೆದ ದೌರ್ಜನ್ಯ ಪ್ರಕರಣದ ಮೂರನೇ ಆರೋಪಿ ಮಂಗಳೂರು ನಿವಾಸಿ ನಾಸರ್ (52)ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದನು. ಕೇರಳ ಹಾಗೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಹಲವು ಹೆಸರುಗಳಲ್ಲಿ ವಾಸಿಸಿದ್ದನು. ಕೇಸಿಗೆ ಹಾಜರಾಗದ ಹಿನ್ನೆಲೆಯಲ್ಲಿ ತಲಶ್ಶೇರಿ ಹೆಚ್ಚುವರಿ ಶೆಶನ್ಸ್ ನ್ಯಾಯಾಲಯ ನಾಸರ್ ವಿರುದ್ಧ ವಾರಂಟ್ ಹೊರಡಿಸಿತ್ತು. ೨೦೦೦ ಸೆ. ೧೮ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. ಎಸ್‌ಐ ಟಿ.ಪಿ. ಸೈಫುದ್ದೀನ್ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ.







