ಕಾಸರಗೋಡು: ಮನೆಗೆ ಅತಿಕ್ರಮಿಸಿ ನುಗ್ಗಿ ಮೂವರಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯ ಮನೆಗೆ ಕಿಚ್ಚಿಡಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೆಂಗಾನ ವೆಳ್ಳಮುಂಡ ಎಂಬಲ್ಲಿನ ಶರತ್ ಎಂಬಾತನ ಮನೆಗೆ ಕಿಚ್ಚಿಡಲಾಗಿದೆ. ಆದರೆ ಕಿಚ್ಚಿಟ್ಟಿರುವುದು ಯಾವಾಗ ಎಂದು ಸ್ಪಷ್ಟಗೊಂಡಿಲ್ಲ. ಅಂಬಲತ್ತರ ಎಸ್‌ಐ ಪ್ರಕಾಶ್‌ರ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮನೆ ಬೆಂಕಿಗಾಹುತಿಯಾಗಿರುವುದು ಕಂಡು ಬಂದಿದೆ. ಸೆ. 28ರಿಂದ ಅಕ್ಟೋಬರ್ 4ರ ಮಧ್ಯೆಗಿನ ದಿನಗಳಲ್ಲಿ ಕಿಚ್ಚಿಟ್ಟಿರಬಹುದೆಂದು ಸಂಶಯಿಸಲಾಗಿದೆ. ಸೆ. 28ರಂದು ಶರತ್ ನೆರೆಮನೆಗೆ ಅತಿಕ್ರಮಿಸಿ ನುಗ್ಗಿ ದಂಪತಿ ಸಹಿತ ಮೂವರಿಗೆ ಇರಿದು ಗಾಯಗೊಳಿಸಿ ದ್ದನು. ಪ್ರಸ್ತುತ ಘಟನೆಗೆ ಸಂಬಂಧಿಸಿ ಅಂಬಲತ್ತರ ಪೊಲೀಸರು ಶರತ್ ವಿರುದ್ಧ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದರು. ನ್ಯಾಯಾಲಯದ ನಿರ್ದೇಶ ಪ್ರಕಾರ ಶರತ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಇರಿತ ಘಟನೆಯ ಬಳಿಕ ಶರತ್‌ನ ಮನೆಯನ್ನು ಮುಚ್ಚುಗಡೆ ಗೊಳಿಸಲಾಗಿತ್ತು. ಶರತ್ ಮೇಲಿನ ದ್ವೇಷದಿಂದ ದ್ವೇಷದಿಂದ ಯಾರೋ ಆತನ ಮನೆಗೆ ಕಿಚ್ಚಿಟ್ಟಿರಬಹುದೆಂದು ಸಂಶಯಿಸಲಾಗಿದೆ.






