ಫೇಸ್ ಬುಕ್ ಮೂಲಕ ಪರಿಚಯ: ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿ ದೃಶ್ಯಗಳನ್ನು ಪತಿಗೆ ಕಳುಹಿಸಿಕೊಟ್ಟ ಯುವಕನ ವಿರುದ್ಧ ಕೇಸು

ಕಾಸರಗೋಡು:  ಫೇಸ್ ಬುಕ್ ಮೂಲಕ ಪರಿಚಯಗೊಂಡ ಯುವತಿಗೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ೪೦ರ ಹರೆಯದ ಯುವತಿಗೆ  ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಪತ್ತನಂತಿಟ್ಟ ನಿವಾಸಿಯಾದ ಪ್ರೇಂ ಎಂಬಾತನ ವಿರುದ್ಧ  ಪೊಲೀಸರು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ಹಾಗೂ ಪ್ರೇಂ  ಫೇಸ್ ಬುಕ್ ಮೂಲಕ ಪರಿಚಯಗೊಂಡಿದ್ದರು. ಬಳಿಕ ಅದು ಪ್ರೇಮಕ್ಕೆ ತಿರುಗಿತು. ಈಮಧ್ಯೆ  ಯುವತಿಯ ಮನೆಗೆ ತಲುಪಿದ ಪ್ರೇಂ ಆಕೆಯನ್ನು ಭೇಟಿಯಾಗಿ ಲೈಂಗಿಕ ದೌರ್ಜನ್ಯವೆಸಗಿ ದ್ದಾನೆನ್ನಲಾಗಿದೆ. ಅನಂತರ ಯುವತಿ ಹಾಗೂ  ಪ್ರಿಯತಮನ ಮಧ್ಯೆ ವಿರಸವುಂಟಾಯಿತು. ಇದರ ದ್ವೇಷದಲ್ಲಿ ತನ್ನ ಫೋನ್‌ನಲ್ಲಿದ್ದ ದೃಶ್ಯಗಳನ್ನು ಪ್ರೇಂ ಯುವತಿಯ ಪತಿಗೆ  ಕಳುಹಿಸಿಕೊಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

RELATED NEWS

You cannot copy contents of this page