ಕೈಕಂಬದಲ್ಲಿ ತ್ಯಾಜ್ಯ ವಿರುದ್ಧ ಕ್ರಿಯಾ ಸಮಿತಿ ಹೋರಾಟಕ್ಕೆ

ಉಪ್ಪಳ: ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದ ವಿರುದ್ಧ ಆಂದೋಲನ ತೀವ್ರಗೊಳಿಸಲು ಕ್ರಿಯಾ ಸಮಿತಿ ಮುಂದೆ ಬಂದಿದೆ. ಕೈಕಂಬದ ಅಪಾರ್ಟ್‌ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ತಿಳಿಸಿದೆ.

ಈ ಅಪಾರ್ಟ್‌ಮೆಂಟ್‌ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರ ಣಗೊ ಳ್ಳುತ್ತಿದ್ದು, ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ಈ ಮಧ್ಯೆ ನಿರಂತರವಾಗಿ ಫ್ಲಾಟ್‌ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದೆ. ಪಂಚಾಯತ್, ಆರೋಗ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಮೌನ ವಹಿಸಿದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದೆ.

ಸಮಿತಿ ಅಧ್ಯಕ್ಷ ಮಹಮ್ಮೂದ್ ಖಾದರ್ ಹಾಜಿ ಈ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಮಹಮ್ಮೂದ್ ಕೈಕಂಬ, ಅಬ್ದುಲ್ ರಹಿಮಾನ್ ಹಾಜಿ, ಅಬೂಕರೀಷ್ಮಾ, ಖಾದರ್ ಆಲಿಕುಂಞಿ ಹಾಜಿ, ನಾಸರ್ ಕರೂರ್, ಲತೀಫ್ ಮಕ್ಕಿ, ಸಂಚಾಲಕ ಸಿದ್ದಿಕ್ ಕೈಕಂಬ, ಅಬೂಬಕ್ಕರ್ ಮಾತನಾಡಿದರು.

You cannot copy contents of this page