ಜೋಡುಕಲ್ಲು ಚಪ್ಪರ ತೆರವು ವಿರೋಧಿಸಿ ಕ್ರಿಯಾ ಸಮಿತಿಯಿಂದ ಸ್ಥಳದಲ್ಲಿ ಯಾಗ, ಭಜನೆ

ಜೋಡುಕಲ್ಲು: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ವಿನಾಯಕ ಚತುರ್ಥಿ ಆಚರಣೆಗಳ ಅಂಗವಾಗಿ ಜೋಡುಕಲ್ಲಿ ನಲ್ಲಿ ನಿರ್ಮಿಸಲಾದ ಚಪ್ಪರವನ್ನು ತೆರವುಗೊಳಿಸುವ ಕ್ರಮವನ್ನು ವಿರೋ ಧಿಸಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸ್ಥಳ ದಲ್ಲಿ ಯಾಗ, ಭಜನೆ ಆರಂಭಗೊA ಡಿದೆ. ಈ ವಿಷಯ ಸಂಬAಧಿಸಿ ಕುಂಟಾರು ರವೀಶ್ ತಂತ್ರಿ ಅವರ ನೇತೃತ್ವದಲ್ಲಿ ಶ್ರೀರಾಮನಾಮ ತಾರಕ ಯಜ್ಞ ನಿನ್ನೆ ಬೆಳಗ್ಗೆ ನಡೆಯಿತು. ಬಳಿಕ ಅನಿರ್ದಿಷ್ಟಾವಧಿ ಭಜನಾ ಕಾರ್ಯ ಕ್ರಮ ಆರಂಭಗೊAಡಿದೆ. ವಿವಿಧ ಭಾಗ ಗಳಲ್ಲಿ ಖಾಸಗಿ ವ್ಯಕ್ತಿಗಳು, ಧಾರ್ಮಿಕ ಸಂಘಟನೆಗಳು ಹಾಗೂ ಸಂಸ್ಥೆಗಳು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವಾಗ, ಧಾರ್ಮಿಕ ಆಚರಣೆಗಳಿಗಾಗಿ ನಿರ್ಮಿಸಲಾದ ಈ ಚಪ್ಪರವನ್ನು ತೆರವುಗೊಳಿಸಲು ಮುಂದಾಗುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಒಂದು ನಿರ್ದಿಷ್ಟ ತೀರ್ಮಾನ ಕೈಗೊಳ್ಳುವ ತನಕ ಕ್ರಿಯಾ ಸಮಿತಿ ವತಿಯಿಂದ ಸ್ಥಳದಲ್ಲಿ ಭಜನೆ, ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿವೆ ಎಂದು ಕ್ರಿಯಾ ಸಮಿತಿ ಕಾರ್ಯದರ್ಶಿ ಲೋಕೇಶ್ ನೋಂಡಾ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಚಪ್ಪರ ತೆರವುಗೊಳಿಸುವ ವಿಷಯ ಸಂಬAಧಿಸಿ ಹಿಂದು ಸಂಘ ಟನೆಗಳ ಮುಖಂಡರ ಮನವೊಲಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಪ್ರಸ್ತುತ ಸ್ಥಳದಲ್ಲಿ ಮಹಿಳಾ ತಂಡಗಳ ಸದಸ್ಯರಿಂದ ಭಜನೆ ನಡೆಯುತ್ತಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕಳೆದ ಸುಮಾರು ೫೭ ವರ್ಷಗಳಿಂದ ಈ ಪ್ರದೇಶದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆಯುತ್ತಿದೆ. ಇದಲ್ಲದೆ ಶಿಶುಮಂದಿ ರದ ಕಾರ್ಯಕ್ರಮ, ಪಲ್ಸ್ ಪೋಲಿಯೋ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಮುಸ್ಲಿಂ ಲೀಗ್ ಪರವಾಗಿ ಓರ್ವರು ನ್ಯಾಯಾಲಯಕ್ಕೆ ಮೊರೆ ಹೋಗಿರುವ ಕಾರಣ ಇಲ್ಲಿಯ ಧಾರ್ಮಿಕ ಚಟುವಟಿಕೆಗಳ ವಿರುದ್ಧ ನ್ಯಾಯಾಲಯದಿಂದ ತೀರ್ಪು ಬಂದಿದೆ. ಈ ವಿಷಯದಲ್ಲಿ ಏಕಪಕ್ಷೀಯ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಪ್ರತಿಕ್ರಿಯಿಸಿದ್ದಾರೆ. ಸೇವಾಭಾರತಿ ಅಧ್ಯಕ್ಷ ದಾಮೋದರ ಉಬರಡ್ಕ, ಆರೆಸ್ಸೆಸ್ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು, ವಿಶ್ವ ಹಿಂದು ಪರಿಷತ್ತು ಮುಖಂಡ ಸಂಕಪ್ಪ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

You cannot copy contents of this page