ಮದ್ಯ ಸೇವಿಸಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್‌ಳ  ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಕ್ರಮ

ಕುಂಬಳೆ: ಮದ್ಯ ಸೇವಿಸಿ ಅಪಾಯ ಕಾರಿ ರೀತಿಯಲ್ಲಿ  ವಾಹನ ಚಲಾಯಿ ಸಿದ  ಹೆಲನ್ ಆಫ್ ಸ್ಪಾರ್ಟ್ ಎಂಬ ಸೋಶ್ಯಲ್ ಮೀಡಿಯಾ ಇಫ್ಲೂವೆನ್ಸರ್ ಧನ್ಯಾಳ ಡ್ರೈವಿಂಗ್ ಲೈಸನ್ಸ್ ಅಮಾನ ತುಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಕಳೆದ ಮಂಗಳವಾರ ಮುಂಜಾನೆ 2 ಗಂಟೆ ವೇಳೆ ಯುವತಿ ಮದ್ಯ ಸೇವಿಸಿ ಚಲಾಯಿಸು ತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿದ್ದರು. ಅಣಂಗೂರಿನ ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರನ್ನು ತಪಾಸಣೆ ನಡೆಸಲು ಪೊಲೀಸರು ತಲುಪಿದಾಗ  ಕಾರನ್ನು  ತಕ್ಷಣ ಚಲಾಯಿಸಿಕೊಂ ಡೊಯ್ಯ ಲಾಗಿದೆ. ಬಳಿಕ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್‌ರ ನೇತೃತ್ವದ  ಪೊಲೀಸ್ ತಂಡ ಕಾರನ್ನು ಹಿಂಭಾಲಿಸಿ ಬಂದ್ಯೋಡು ಭಗವತೀ ನಗರದಲ್ಲಿ ತಡೆದು ನಿಲ್ಲಿಸಿದ್ದರು. ಕಾರನ್ನು ಪರಿಶೀಲಿಸಿದಾಗ ಧನ್ಯ ಡ್ರೈವಿಂಗ್ ಸೀಟಿನಲ್ಲಿದ್ದಳು. ಅನಂತರ ನಡೆಸಿದ ಬ್ರೀತ್ ಅನಲೈಸರ್ ತಪಾಸಣೆ ವೇಳೆ ಈಕೆ ಮದ್ಯ ಸೇವಿಸಿದ್ದುದಾಗಿ ತಿಳಿದುಬಂದಿತ್ತು. ಮದ್ಯದಮಲಿನಲ್ಲಿ ನಿರ್ಲಕ್ಷ್ಯವಾಗಿ  ಮನುಷ್ಯ ಜೀವಕ್ಕೆ ಅಪಾಯವುಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸಿದ ಆರೋಪದಂತೆ ಧನ್ಯಳಿಗೆ ಅಲ್ಲಿಂದಲೇ ಪೊಲೀಸರು ನೋಟೀಸು ನೀಡಿದ್ದರು.  ಮೊದಲು ಟಿಕ್‌ಟಾಕ್ ವೀಡಿಯೋ ಮೂಲಕ ಗಮನ ಸೆಳೆದಿದ್ದ ಧನ್ಯ ಟಿಕ್‌ಟಾಕ್ ನಿಷೇಧಿಸಿದ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಸಕ್ರಿಯಳಾಗಿದ್ದಳು.

RELATED NEWS

You cannot copy contents of this page