ತಿರುವನಂತಪುರ: ಕೃತಕತ ಬುದ್ಧಿ ಮತ್ತೆಯನ್ನು ಮುಂದಿನ ವರ್ಷದಿಂದ ಶಾಲೆಗಳಲ್ಲಿ ಒಂದು ಪಠ್ಯ ವಿಷಯವನ್ನಾ ಗಿಸಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನಿಸಿದೆ. ಇದರಂತೆ ೩ನೇ ತರಗತಿಯಿಂದ ಎಐಯನ್ನು ಒಂದು ಪಠ್ಯ ವಿಷಯ ವನ್ನಾಗಿಸುವ ಅಗತದ ತಯಾರಿಯಲ್ಲಿ ಕೇಂದ್ರ ಸರಕಾರ ತೊಡಗಿದೆ. ಪರೀಕ್ಷಣಾರ್ಥವಾಗಿ ತರಗತಿಗಳಲ್ಲಿ ಪಠ್ಯ ವಿಷಯಗಳನ್ನು ಮಂಡಿಸುವ ನೋಟ್ ಪುಸ್ತಕಗಳನ್ನು ಎಐ ಟೂಲ್ಗಳ ಸಹಾಯದೊಂದಿಗೆ ತಯಾರಿಸುವ ಕ್ರಮವನ್ನು ಆರಂಭಿಸ ಲಾಗಿದೆ. ಇದನ್ನು ಅಧ್ಯಾಪಕರಿಗೆ ಲಭಿಸುವಂತೆ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಜ್ಯಾರಿಯಲ್ಲಿ ಹೆಚ್ಚು ಕಡಿಮೆ 18,000 ಸಿಬಿಎಸ್ಇ ಶಾಲೆಗಳಲ್ಲಿ ಹೆಚ್ಚುವರಿ ಪಠ್ಯ ವಿಷಯವಾಗಿ ಆರನೇ ತರಗತಿಯಿಂದ ಕೌಶಲ್ಯ ಸಾಮರ್ಥ್ಯ ವಿಷಯವಾಗಿ ಎಐಯನ್ನು ಕಲಿಸಲಾಗುತ್ತಿದೆ.







