ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕ ವತಿಯಿಂದ ಕೃಷಿರಂಗದಲ್ಲಿ ಉತ್ತಮ ಸಾಧನೆಗೈದ ಹಮೀದ್ ಮಣಿಯನ್ನು ಗೌರವಿಸಲಾಯಿತು. ಸಾಮಾಜಿಕ, ಸಾಂಸ್ಕೃತಿಕ ಶಿಕ್ಷಣ ವಲಯಗಳಲ್ಲಿ ಸಕ್ರಿಯರಾಗಿದ್ದ ಇವರು ಯುವ ಕೃಷಿಕ ಪ್ರತಿಭೆಯಾಗಿದ್ದಾರೆ. ೨೦೨೫ರಲ್ಲಿ ಉತ್ತಮ ಸಂಯೋಜಿತ ಮೀನು ಕೃಷಿಗಿರುವ ಬ್ಲೋಕ್ ಮಟ್ಟದ ಪ್ರಶಸ್ತಿ ಇವರಿಗೆ ಲಭಿಸಿದೆ. ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ರಾಜೇಂದ್ರನ್ ಅಭಿನಂದಿಸಿದರು. ಕಾರ್ಯದರ್ಶಿ ಸುಜಿತ್ ಸ್ವಾಗತಿಸಿ, ಕೋಶಾಧಿಕಾರಿ ಮನೀಶ್, ಉಪಾಧ್ಯಕ್ಷ ಅಖಿಲ್, ಶ್ರೀಕಾಂತ್ ಶುಭ ಕೋರಿದರು.
