ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ವತಿಯಿಂದ ಎಕೆಪಿಎ ಸ್ಥಾಪಕ ದಿನಾಚರಣೆಯಂಗವಾಗಿ ಜಿಲ್ಲೆಯ ಛಾಯಾಗ್ರಹಣ ಸಂಬಂಧಪಟ್ಟ ವಲಯದಲ್ಲಿ 40 ವರ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದ ಸದಸ್ಯರನ್ನು ಗೌರವಿಸಲಾಯಿತು. ಕಾಸರಗೋಡು ಎಕೆಪಿಎ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾರ ಅಧ್ಯಕ್ಷತೆಯಲ್ಲಿ ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಉದ್ಘಾಟಿಸಿದರು. ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಮುಖ್ಯ ಅತಿಥಿಯಾಗಿದ್ದರು. ಛಾಯಾಗ್ರಹಣ ವಲಯದಲ್ಲಿ ೪೦ ವರ್ಷ ಪೂರ್ತಿಗೊಳಿಸಿದವರನ್ನು ಕುಮಾರನ್ ಮಾಸ್ತರ್ ಗೌರವಿಸಿದರು. ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ಜೊತೆ ಕಾರ್ಯದರ್ಶಿ ಸುಧೀರ್ ಕೆ., ಜಿಲ್ಲಾ ವೆಲ್ಫೇರ್ ಅಧ್ಯಕ್ಷ ಶರೀಫ್ ಶುಭಕೋರಿದರು. ಗೌರವ ಸ್ವೀಕರಿಸಿದ ಸದಸ್ಯರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್. ಸ್ವಾಗತಿಸಿ, ಕೋಶಾಧಿಕಾರಿ ಪ್ರಜಿತ್ ಎನ್.ಕೆ ವಂದಿಸಿದರು.
