ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಕಾಸರಗೋಡು ಈಸ್ಟ್ ಘಟಕದ ನೇತೃತ್ವದಲ್ಲಿ ಗಾಂಧಿ ಜಯಂತಿಯಂಗವಾಗಿ ಜಿಡಬ್ಲ್ಯುಎಲ್‌ಪಿ ಶಾಲೆಯಲ್ಲಿ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು. ಈಸ್ಟ್ ಘಟಕ ಅಧ್ಯಕ್ಷ ಸುಜಿತ್‌ರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನಗರಸಭೆ ಕೌನ್ಸಿಲರ್ ವೀಣಾ ಅರುಣ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯ ಕುಮಾರಿ ಸ್ಪರ್ಧಾಳುಗಳಾದ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಕಿಟ್ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ಕೋಶಾಧಿಕಾರಿ ಶ್ರೀಕಾಂತ್, ಪಿ.ಆರ್.ಒ ಮನೀಶ್, ಘಟಕ ಸಮಿತಿ ಸದಸ್ಯ ದಿನೇಶ್ ಇನ್‌ಸೈಟ್, ಫೈಸಲ್, ಅಜಿತ್ ಕುಮಾರ್ ಭಾಗವಹಿಸಿದರು. ಘಟಕ ಕಾರ್ಯದರ್ಶಿ ಅಖಿಲ್ ಸ್ವಾಗತಿಸಿ, ಅಧ್ಯಾಪಿಕೆ ಪೂರ್ಣಿಮ ವಂದಿಸಿದರು.
