ನೀರ್ಚಾಲು: ಕಾಂಗ್ರೆಸ್ ನೇತಾರನೂ, ನಿವೃತ್ತ ಆರೋಗ್ಯ ಇಲಾಖೆ ನೌಕರ ಐತ್ತಪ್ಪ ಚೆನ್ನೆಗುಳಿ ಅವರ ನಿಧನಕ್ಕೆ ಸರ್ವಪಕ್ಷ ಸಂತಾಪ ಸೂಚಕ ಸಭೆ ನಡೆಸಲಾಯಿತು. ಕಾಂಗ್ರೆಸ್ ಬದಿಯಡ್ಕ ಮಂಡಲ ಕಮಿಟಿ ನೇತೃತ್ವದಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೀಲಕಂಠನ್ ಪುಷ್ಪಾರ್ಚನೆ ನಡೆಸಿದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು.
ವಿವಿಧ ಪಕ್ಷಗಳ ನೇತಾರರಾದ ಬದಿಯಡ್ಕ ಪಂ. ಅಧ್ಯಕ್ಷ ಎಂ. ಅಬ್ಬಾಸ್, ಕುಂಜಾರು ಮೊಹಮ್ಮದ್ ಹಾಜಿ, ಸುಬೈರ್ ಬಾಪಾಲಿಪೊನ, ನಾರಾಯಣ ಮಣಿಯಾಣಿ ನೀರ್ಚಾಲು, ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ, ಖಾದರ್ ಮಾನ್ಯ, ಅಬ್ಬಾಸ್ ಸಖಾಫಿ ಮಂಟಮೆ, ಆಲಿಕುಂಞಿ ಮದನಿ, ಖಮರುದ್ದೀನ್ ಪಾಡ್ಲಡ್ಕ, ಮೊಯ್ದೀನ್ ಪಾಡ್ಲಡ್ಕ, ಶ್ರೀನಾಥ್ ಬದಿಯಡ್ಕ, ರಹೀಂ, ಬೆಂಜಮಿನ್ ಡಿಸೋಜ, ಗೋಪಾಲ, ಲೋಹಿತ್, ಅಸೀಸ್ ಪಾಡ್ಲಡ್ಕ ಹಾಗೂ ಐತ್ತಪ್ಪರ ಕುಟುಂಬ ಸದಸ್ಯರು ಪಾಲ್ಗೊಂಡರು.