ಕುಂಬಳೆ: ಸಂಸ್ಥೆಗೆ ತಿಳಿಯದೆ ಹಬ್ನಿಂದ ಪಶು ಆಹಾರ ಮಾರಾಟ ಮಾಡಿ ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಪ್ರಸ್ತುತ ಹಬ್ನ ಮಾರ್ಕೆಟಿಂಗ್ ಮೆನೇ ಜರ್ ವಿರುದ್ಧ ಕುಂಬಳೆ ಪೊಲೀಸರು ವಿಶ್ವಾಸಘಾತಕ ತೋರಿದ ಸೆಕ್ಷನ್ ಪ್ರಕಾರ ಪ್ರಕgಣ ದಾಖಲಿಸಿಕೊಂಡಿ ದ್ದಾರೆ. ಎಳಂಬಚ್ಚಿ ನಿವಾಸಿ ಬಿಜು ಪಿ.ಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ. ಕುಂಬಳೆ ಕೊಯಿಪ್ಪಾಡಿಯಲ್ಲಿ ಕಾರ್ಯವೆಸಗುತ್ತಿರುವ ಎಂಆರ್ಡಿಎಸ್ ಎಂಬ ಸಂಸ್ಥೆಯ ಹಬ್ ನಿಂದ ತಲಾ 25 ಕಿಲೋ ದ 1221 ಗೋಣಿ ಚೀಲದಷ್ಟು ಪಶು ಆಹಾರವನ್ನು 2025 ಅಗೋಸ್ತ್ 8 ಮತ್ತು 2026 ಜುಲೈ 14ರ ನಡುವಿನ ಅವಧಿಯಲ್ಲಿ ಸಂಸ್ಥೆಗೆ ತಿಳಿಯದೆ ಮಾರಾಟ ಮಾಡಿರುವುದಾಗಿ ಪ್ರಸ್ತುತ ಸಂಸ್ಥೆ ಎರ್ನಾಕುಳಂ ಇಡಪ್ಪಳ್ಳಿ ಟೋಲ್ ನಿವಾಸಿ ಜೋರ್ಜ್ ಕುಟ್ಟಿ ಜೇಕಬ್ ನೀಡಿದ ದೂರಿತೆ ಆ ಸಂಸ್ಥೆಯ ಮಾರ್ಕೆಟಿಂಗ್ ಮೆನೇಜರ್ ಬಿಜುವಿನ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.






