ತಿರುವನಂತಪುರ: ವಾಟ್ಸಪ್ ಗ್ರೂಪ್‌ನಲ್ಲಿ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆಂಬ ಆರೋಪ ಪಾಲ ಕ್ಕಾಡ್ ಶಾಸಕ ರಾಹುಲ್ ಮಾಕೂಟ ತ್ತಿಲ್‌ರ ಮೇಲೆ ಉಂಟಾಗಿದ್ದು, ಆ ಹಿನ್ನೆಲೆ ಯಲ್ಲಿ ಅವರು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳ್ಳುವ ಸಾಧ್ಯತೆ ಉಂಟಾಗಿದೆ.
ರಾಹುಲ್ ಮಾಕೂಟತ್ತಿಲ್ ವಿರುದ್ಧ ಕಾಂಗ್ರೆಸ್‌ನ ಕೆಲವು ಮಹಿಳಾ ನೇತಾರರೂ, ಕಾಂಗ್ರೆಸ್‌ನ ಕೇರಳ ಘಟಕದ ಹೊಣೆಗಾರಿಕೆ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾದಾಸ್ ಮುನ್ಶಿಗೆ ದೂರು ನೀಡಿದ್ದು ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಕಾಂಗ್ರೆಸ್‌ನ ರಾಜ್ಯ ನೇತೃತ್ವಕ್ಕೆ ನಿರ್ದೇಶ ನೀಡಿದ್ದಾರೆ. ಇನ್ನೊಂದೆಡೆ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಮತ್ತು ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಸನ್ನಿ ಜೋಸೆಫ್ ಈ ಬಗ್ಗೆ ಅಧಿಕೃತ ಚರ್ಚೆ ನಡೆಸಿದ್ದಾರೆ. ಈ ವಿಷಯದ ಬಗ್ಗೆ ಕಾಂಗ್ರೆಸ್‌ನ ಇತರ ಹಿರಿಯ ನೇತಾರರೊಂದಿಗೂ ಚರ್ಚೆ ನಡೆಸಲು ಅವರು ತೀರ್ಮಾನಿಸಿದ್ದಾರೆ. ಬಳಿಕವಷ್ಟೇ ಈ ವಿಷಯದಲ್ಲಿ ಪಕ್ಷ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಿದೆ. ಅದರ ಆಧಾರದಲ್ಲಿ ರಾಹುಲ್ ಮಾಕೂಟತ್ತಿಲ್‌ರ ವಿರುದ್ಧ ಯೂತ್ ಕಾಂಗ್ರೆಸ್ ಕೇಂದ್ರ ನೇತೃತ್ವ ಯಾವುದೇ ತೀರ್ಮಾನ ಕೈಗೊಳ್ಳಲಿದೆ. ರಾಹುಲ್ ಮಾಕೂಟತ್ತಿಲ್ ತಪ್ಪು ಮಾಡಿದ್ದಲ್ಲಿ ಅವರನ್ನು ಸಂರಕ್ಷಿಸುವ ಅಗತ್ಯವಿಲ್ಲವೆಂಬ ನಿಲುವನ್ನು ಕಾಂಗ್ರೆಸ್‌ನ ಹಿರಿಯ ನೇತಾರರು ತಳೆದಿದ್ದಾರೆ.ಈ ವಿಷಯವನ್ನು ಇನ್ನೊಂದೆಡೆ ಬಿಜೆಪಿ ಮತ್ತು ಸಿಪಿಎಂ ಪ್ರಧಾನ ಅಸ್ತ್ರವನ್ನಾಗಿಸಿ ಕಾಂಗ್ರೆಸ್‌ನ ವಿರುದ್ಧ ಪ್ರಯೋಗಿಸಿತೊಡಗಿದೆ.