ಕಾಸರಗೋಡು: ರೈಲುಗಳಲ್ಲಿ ಹಳಸಿದ ಆಹಾರ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರ್‌ಪಿಎಫ್, ರೈಲ್ವೇ ಪೊಲೀಸ್ ಸಂಯುಕ್ತವಾಗಿ ರೈಲುಗಳಲ್ಲಿ ತಪಾಸಣೆ ಆರಂಭಿಸಿದೆ. ಕೊಂಕಣ ಮೂಲಕ ಬರುವ ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ರೈಲುಗಳಲ್ಲಿ ನಿನ್ನೆ ತಪಾಸಣೆ ನಡೆಸಲಾಗಿದೆ. ಕ್ಯಾಂಟೀನ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ವಂದೇ ಭಾರತ್ ರೈಲಿಗೆ ಬೆಳಿಗ್ಗೆ ಆಹಾರ ಪೂರೈಸುವ ಐಆರ್‌ಸಿಟಿಸಿ ಕ್ಯಾಂಟೀನ್ ಸಹಿತ ಸಂಸ್ಥೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಆದರೆ ಹಳಸಿದ ಆಹಾರ ಪತ್ತೆಹಚ್ಚಲಾಗಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಪೊಲೀಸ್ ಎಸ್.ಎಚ್.ಒ. ಎಂ. ರೆಜಿಕುಮಾರ್, ಆರ್‌ಪಿಎಫ್ ಎಸ್ ವಿನೋದ್, ಎಸ್.ಐ. ಪ್ರದೀಪ್ ಕುಮಾರ್, ಇಂಟೆಲಿಜೆನ್ಸ್ ಅಧಿಕಾರಿ ಜ್ಯೋತಿಷ್ ಜೋಸ್ ಎಂಬಿವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ.







