ಮುಳ್ಳೇರಿಯ: ಹಾವು ಕಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಆದೂರು ಆಲಂತಡ್ಕದ ಚಂದ್ರನ್ (60) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಗೋಸ್ತ್ ೨೧ರಂದು ಮನೆ ಪರಿಸರದಲ್ಲಿ ಚಂದ್ರನ್‌ರಿಗೆ ಹಾವು ಕಚ್ಚಿತ್ತು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ಚಿಕಿತ್ಸೆಗಾಗಿ ಪ್ರತಿದಿನ ಭಾರೀ ಮೊತ್ತ ವ್ಯಯಿಸ ಬೇಕಾಗಿ ಬಂದಿತ್ತು. ಬಡ ಕುಟುಂಬವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿರುವ ಹಣವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಕುಟುಂಬ ಸಂಕಷ್ಟಕ್ಕೀಡಾದಾಗ ಸ್ಥಳೀಯರು ಚಿಕಿತ್ಸಾ ಸಹಾಯ ಸಮಿತಿ ರೂಪೀಕರಿಸಿ ಕಾರ್ಯಾಚರಿಸಿದ್ದರು. ಆದರೂ ಚಂದ್ರನ್‌ರ ಜೀವ ಉಳಿಸಲು ಸಾಧ್ಯವಾಗದ ದುಃಖ ಸಂಬಂಧಿಕರಲ್ಲಿ ಹಾಗೂ ಸ್ಥಳೀಯರಲ್ಲಿದೆ. ಪ್ರಕರಣದಲ್ಲಿ ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.
ಮೃತರು ಪತ್ನಿ ಸರೋಜಿನಿ, ಮಕ್ಕಳಾದ ನಿತಿನ್, ನಿರೋಶಾ, ನಿಶಾ ಕುಮಾರಿ, ಸೊಸೆ ಪ್ರಸೀತ, ಅಳಿಯಂದಿರಾದ ಶ್ರೀಜಿತ್, ಶಶಿಧರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.