ಕುಂಬಳೆ: ಶ್ರೀ ಕ್ಷೇತ್ರ ಅನಂತಪುರ ದಲ್ಲಿ ಜರಗಲಿರುವ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಪಂಚಾಯತ್ ಮಟ್ಟದ ಪ್ರಮುಖರ ಪೂರ್ವಭಾವಿ ಸಮಾಲೋಚನಾ ಸಭೆ ಕ್ಷೇತ್ರ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಐ.ಎ.ಎಸ್. ಅಧಿಕಾರಿ ಶಶಿಧರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು “ರಾಜ್ಯದ ರಾಜಧಾನಿ ತಿರುವನಂತಪುರಕ್ಕೂ ಮತ್ತು ಅನಂತಪುರದ ಮೂಲ ಕ್ಷೇತ್ರಕ್ಕೂ ಅನಾದಿಕಾಲದಿಂದಲೂ ಅವಿನಾಭಾವ ಸಂಬAಧವಿದೆ. ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವ ಬ್ರಹ್ಮಕಲಶ ಮಹೋ ತ್ಸವದ ಯಶಸ್ಸು ನಿಂತಿರುವುದೇ ಭಕ್ತರಿಗೆ ಕಲ್ಪಿಸುವ ಅಚ್ಚುಕಟ್ಟಾದ ಶ್ರೀ ದೇವರ ದರ್ಶನ ಹಾಗೂ ಊಟೋಪಚಾರದ ಸುವ್ಯವಸ್ಥೆಯ ಮೇಲೆ. ಈ ಪವಿತ್ರ ಕಾರ್ಯದಲ್ಲಿ ಶಿಸ್ತುಬದ್ಧ ಸ್ವಯಂ ಸೇವಕರ ಪಡೆ ಮಹತ್ತರ ಪಾತ್ರ ವಹಿಸಬೇಕಾಗಿದ್ದು, ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಸ್ವಯಂಸೇವಕರಾಗಿ ಕೈಜೋಡಿಸÀಬೇಕು” ಎಂದು ಕರೆ ನೀಡಿದರು. ಸುನಿಲ್ ಕುದ್ರೆಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿ ಸಿದ್ದ ಪವಿತ್ರನ್ ಕುದ್ರೆಪಾಡಿ ಮಾತನಾಡಿ ಅನಂತಪುರದಲ್ಲಿ ನಡೆಯಲಿರುವ ಬ್ರಹ್ಮಕಲಶ ಸಹಿತ ತೆಪ್ಪೋತ್ಸವಕ್ಕೂ ಅಭೂತಪೂರ್ವ ಜನಸಾಗರ ಸೇರುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಬೃಹತ್ ಸಿದ್ಧತೆಗಳೊಂದಿಗೆ ನಿಸ್ವಾರ್ಥ ಸ್ವಯಂಸೇವಕರನ್ನು ಸಜ್ಜುಗೊಳಿಸು ವುದು ತುರ್ತು ಅಗತ್ಯವಾಗಿದೆ ಎಂದರು. ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಕೃಷ್ಣ ಆಳ್ವ ನಾವೂರು, ದಿನೇಶ್ ಬಂಬ್ರಾಣ ಮಾತನಾಡಿದರು. ಬ್ರಹ್ಮಕಲಶದ ಸಿದ್ಧತೆಯಂಗವಾಗಿ ಡಿಸೆಂಬರ್ ೬ ರಂದು ಕಾರ್ಯಕರ್ತರ ಬೃಹತ್ ಸಮಾ ವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ವಿಘ್ನೇಶ್ವರ ಮಾಸ್ಟರ್ ಪೆರ್ಣೆ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ಉಪೇಂದ್ರ ಕೋಟೆಕಣಿ, ಪ್ರದೀಪ್ ಬೆಳ್ಳೂರು, ಹರೀಶ್ ಸಿದ್ದಿಬೈಲು, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಹಾಗೂ ಆರ್ಥಿಕ ಸಮಿತಿ ಸಂಚಾಲಕ ಬಾಬು ಮಾಸ್ಟರ್ ಸಿದ್ದಿಬೈಲು, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಸತ್ಯಶಂಕರ ಅನಂತಪುರ, ಪ್ರಚಾರ ಸಮಿತಿ ಸಂಚಾಲಕ ಶಿವರಾಮ ಕಣ್ಣೂರು, ಸುಚಿತ್ರಾ ಟೀಚರ್, ಪ್ರತೀಕ್ ಆಳ್ವ ಹಾಗೂ ಸಮಾಜ ಸೇವಕರು ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು. ಕೃತಿಕಾ ಆಳ್ವ ಪ್ರಾರ್ಥಿಸಿ, ಅವಿನಾಶ್ ಅನಂತ ಪುರ ಸ್ವಾಗತಿಸಿದರು. ಸುದರ್ಶನ್ ಅನಂತಪುರ ವಂದಿಸಿದರು.




