ಸ್ಥಳೀಯಾಡಳಿತ ಚುನಾವಣೆ ಸ್ವೀಕೃತಿ-ವಿತರಣೆ ಕೇಂದ್ರಗಳ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ವೀಕೃತಿ, ವಿತರಣೆ ಕೇಂದ್ರಗಳನ್ನು ತೀರ್ಮಾನಿಸಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಅಡಿಯಲ್ಲಿ ಬರುವ ಗ್ರಾಮ ಪಂಚಾಯತ್‌ಗಳಿಗೆ (ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡ್, ಚೆಂಗಳ,ಬದಿಯಡ್ಕ) ಸರಕಾರಿ ಕಾಲೇಜು ಕಾಸರಗೋಡು, ವಿದ್ಯಾನಗರ ಪೂರ್ವ ಪಶ್ಚಿಮದಲ್ಲಿರುವ ಪ್ರಧಾನ ಕಟ್ಟಡದ ಕೆಳ ಅಂತಸ್ತು, ಇತರ ಕಟ್ಟಡಗಳು ಸ್ವೀಕೃತಿ, ವಿತರಣೆ ಕೇಂದ್ರವಾಗಿ ಮಂಜೂರು ಮಾಡಲಾಗಿದೆ.

ಕಾಞಂಗಾಡ್ ಬ್ಲೋಕ್ ಪಂಚಾಯತ್‌ನ ಗ್ರಾಮ ಪಂಚಾಯತ್‌ಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲೋಕ್ ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ (ಕುಂಬ್ಡಾಜೆ, ಬೆಳ್ಳೂರು, ದೇಲಂಪಾಡಿ, ಕಾರಡ್ಕ, ಮುಳಿಯಾರು, ಕುತ್ತಿಕ್ಕೋಲ್, ಬೇಡಡ್ಕ) ಬಿಎಆರ್ ಹೈಯರ್ ಸೆಕೆಂಡರಿ ಶಾಲೆ ಬೋವಿಕ್ಕಾನ, ಮಂಜೇಶ್ವರ ಬ್ಲೋಕ್ ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ (ಮಂಗಲ್ಪಾಡಿ, ವರ್ಕಾಡಿ, ಪುತ್ತಿಗೆ, ಮೀಂಜ, ಮಂಜೇಶ್ವರ, ಪೈವಳಿಕೆ, ಎಣ್ಮಕಜೆ) ಜಿಎಚ್‌ಎಸ್‌ಎಸ್ ಕುಂಬಳೆ, ನೀಲೇಶ್ವರ ಬ್ಲೋಕ್ ಪಂಚಾಯತ್‌ನ ಅಧೀನದ ಗ್ರಾಮ ಪಂಚಾಯತ್‌ಗಳಿಗೆ ನೆಹರು ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು ಪಡನ್ನಕ್ಕಾಡ್, ಪರಪ್ಪ ಬ್ಲೋಕ್ ಪಂ.ನ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ ಜಿಎಚ್ ಎಸ್‌ಎಸ್ ಪರಪ್ಪ ಸ್ವೀಕೃತಿ ಹಾಗೂ ವಿತರಣೆ ಕೇಂದ್ರವಾಗಿ ಮಂಜೂರು ಮಾಡಲಾಗಿದೆ. ಕಾಸರಗೋಡು ನಗರಸಭೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜನ್ನು ವಿತರಣೆ ಕೇಂದ್ರವಾಗಿ ಘೋಷಿಸಲಾಗಿದೆ.

RELATED NEWS

You cannot copy contents of this page