ಎಡನೀರು: ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನೆ ನಿನ್ನೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಧ್ವಜಾರೋಹಣಗೈದರು. ಅಖಿಲ ಭಾರತೀಯ ಕುಟುಂಬ ಪ್ರಭೋದಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು.
ವಿದ್ವಾನ್ ಎಂ.ಕೆ. ಪ್ರಾಣೇಶ್‌ರಿಂದ ವೇಣುವಾದನ ನಡೆಯಿತು. ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ಸಂಜೆ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಇವರಿಂದ ಬಡಗುತಿಟ್ಟು ಯಕ್ಷಗಾನ ಬಯಲಾಟ, ಖ್ಯಾತ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ಜರಗಿತು.