ತಿರುವನಂತಪುರ: ತಿರುವನಂತ ಪುರದ ಯುವತಿಯೋರ್ವೆಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿದ ಆರೋಪದಂತೆ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ತಿರುವನಂತಪುರ ನೇಮಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂ ಡಿರುವ ಬೆನ್ನಲ್ಲೇ ಅವರು ನನಗೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಇನ್ನೋರ್ವೆ ಯುವತಿ ದೂರು ನೀಡಿದ್ದಾಳೆ. ಈಗ ದೂರು ನೀಡಿರುವ ಯುವತಿ ಬೆಂಗಳೂರು ನಿವಾಸಿಯಾ ಗಿದ್ದು, ಕಿರುಕುಳ ಕುರಿತಾದ ದೂರನ್ನು ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಹಾಗೂ ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ ಸಣ್ಣಿ ಜೋಸೆಫ್‌ರಿಗೆ ಇ ಮೈಲ್ ಮೂಲಕ ಸಲ್ಲಿಸಿದ್ದಾಳೆ. ನಿನ್ನೆ ಮಧ್ಯಾಹ್ನ ದೂರು ಲಭಿಸಿದ್ದು ಅದನ್ನು ಕೂಡಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹಸ್ತಾಂತರಿಸಿ ದ್ದಾರೆ. ಇದರಂತೆ ರಾಹುಲ್ ವಿರುದ್ಧ ಇನ್ನೊಂದು ಕೇಸು ದಾಖಲಿಸಿಕೊಳ್ಳು ವುದು ಖಚಿತಗೊಂಡಂತಾಗಿದೆ. ಬೆಂಗಳೂರು ನಿವಾಸಿಯಾಗಿರುವ ೨೩ರ ಹರೆಯದ ಯುವತಿ ನೀಡಿರುವ ದೂರಿ ನಲ್ಲಿ ತಾನು ೨೦೨೩ರಲ್ಲಿ ಕ್ರೂರ ರೀತಿ ಯಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿ ರುವುದಾಗಿ ಆರೋಪಿಸಿದ್ದಾಳೆ. ಇನ್‌ಸ್ಟಾ ಗ್ರಾಂ ಮೂಲಕ ತನ್ನನ್ನು ಪರಿಚಯ ಗೊಂಡ ರಾಹುಲ್ ತನ್ನ ಫೋನ್ ನಂಬ್ರ ಪಡೆದು ಪರಿಚಯ ಬೆಳೆಸಿಕೊಂ ಡಿದ್ದಾನೆ. ಬಳಿಕ ತನಗೆ ಅತ್ಯಂತ ಕ್ರೂರ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ತಿರುವನಂತಪುರದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದಂತೆ ಕೇಸು ದಾಖಲಾದ ತಕ್ಷಣ ದಿಂದ ತಲೆಮರೆಸಿಕೊಂಡಿರುವ ರಾಹುಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ ಇಂದು ಪರಿಶೀಲಿಸಲಿದೆ. ಈ ಬಗ್ಗೆ ನ್ಯಾಯಾಲಯ ನೀಡುವ ತೀರ್ಪು ರಾಹುಲ್‌ಗೆ ಅತೀ ನಿರ್ಣಾಯಕವಾಗಿ ರಲಿದೆ. ಲೈಂಗಿಕ ಕಿರುಕುಳ ನೀಡಿದ ಬಗ್ಗೆ ರಾಹುಲ್ ವಿರುದ್ದ ದೂರುಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕತ್ವ ರಾಹುಲ್‌ರನ್ನು ಪಕ್ಷದಿಂದಲೇ ವಜಾಗೈಯ್ಯಲು ಮುಂದಾಗಿದೆ. ಈ ವಿಷಯ ದಲ್ಲಿ ರಾಹುಲ್ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋ ಗಿಸುವ ಕಾಲ ಈಗ ಸನ್ನಿಹಿತವಾಗಿದೆ. ಅದಕ್ಕಿರುವ ಸಿದ್ಧತೆಯಲ್ಲಿ ಪಕ್ಷ ತೊಡಗಿದೆ ಯೆಂದು ಕಾಂಗ್ರೆಸ್‌ನ ಹಿರಿಯ ನೇತಾರ ಕೆ. ಮುರಳೀಧರನ್ ಹೇಳಿದ್ದಾರೆ.







