ಬೆಳ್ಳೂರು: ಪಂಚಾಯತ್‌ನ ಮೂರನೇ ವಾರ್ಡ್ ಕುಳದಪಾರೆಯ ನಾಕೂರು ಎಸ್‌ಸಿ ಕಾಲನಿಯಲ್ಲಿ ಕುಡಿ ಯುವ ನೀರು ಸಮಸ್ಯೆ ತಲೆದೋರಿದೆ. ಪದೇ ಪದೇ ವಿದ್ಯುತ್ ಮೊಟಕುಗೊಳ್ಳು ತ್ತಿರುವುದರಿಂದ ಇಲ್ಲಿನ 30ರಷ್ಟು ಕುಟುಂಬಗಳು ನೀರಿಗಾಗಿ ಪರದಾಡಬೇಕಾಗುತ್ತಿದೆ. ಇಲ್ಲಿನ ಕುಡಿಯುವ ನೀರು ವಿತರಣೆ ಯೋಜನೆಗೆ ತ್ರಿಫೇಸ್ ವಿದ್ಯುತ್ ಲೈನ್‌ನ ಅಗತ್ಯವಿದೆ. ಇದೀಗ ವಿದ್ಯುತ್ ಸಂಪರ್ಕವಿದ್ದರೂ ವಿದ್ಯುತ್ ಲೈನ್ ತೋಟದ ಮೂಲಕ ಸಾಗುತ್ತಿದೆ. ಇದರಿಂದ ತಂತಿಗಳ ಮೇಲೆ ಸೋಗೆ, ಮಡಲು ಬೀಳುತ್ತಿರುವುದರಿಂದ ಪದೇ ಪದೇ ವಿದ್ಯುತ್ ಮೊಟಕುಗೊಳ್ಳುತ್ತಿ ರುವುದು ನೀರು ವಿತರಣೆಗೆ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲನಿಯ ಕುಡಿಯುವ ನೀರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಕಾರ್ಯಕರ್ತ ಶಶಿಧರ ಗೋಳಿಕಟ್ಟೆ ನೇತೃತ್ವದಲ್ಲಿ ದಾಮೋದರ ಎನ್.ಎ, ಶ್ರೀಜಿತ್ ಕುಳದಪಾರೆ ಎಂಬಿವರನ್ನೊಳಗೊಂಡ ಸಮಿತಿ ರೂಪೀಕರಿಸಲಾಗಿದೆ. ಇದರಂತೆ ಕಾಲನಿಯ ಕುಡಿಯುವ ನೀರು ಯೋಜನೆಗಿರುವ ವಿದ್ಯುತ್ ಲೈನ್ ಬದಲಿಸಿ ಸ್ಥಾಪಿಸಬೇಕಾಗಿ ಒತ್ತಾಯಿಸಿ ಶಶಿಧರ ಗೋಳಿಕಟ್ಟೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
