ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

ಬದಿಯಡ್ಕ: ಅರಶಿನ ಕುಂಕುಮ ಹಿಂದೂಧರ್ಮದ ಸಂಸ್ಕೃತಿಯಾಗಿದೆ. ಮನುಷ್ಯ ಜೀವನದಲ್ಲಿ ನಡೆಯುವ ಪ್ರತೀ ಹೆಜ್ಜೆ ಮತ್ತು ಬದುಕು ಒಂದು ಪರಿಪಾಠವಾಗಿದೆ. ನಾವು ಬದುಕುವ ಮಹತ್ವವೇ ಹಿಂದುತ್ವ, ಹಿಂಧೂಧರ್ಮ ಅಂತ ನಮ್ಮ ನೆನಪಲ್ಲಿರಬೇಕು ಎಂದು ವಾಗ್ಮಿ ಸಹನಾ ಕುಂದರ್ ಉಡುಪಿ ಹೇಳಿದರು. ಸನಾತನ ಸಾಂಸ್ಕೃತಿಕ ಯುವ ಕಲಾವೇದಿಕೆ ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಸಭಾಭವನದಲ್ಲಿ ಜರಗಿದ ಅರÀಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯÁಗಿ ಪಾಲ್ಗೊಂಡು ಅವರು ಮಾತನಾಡಿದರು.
ತೊಟ್ಟಿಲು ತೂಗುವ ಕೈ ಇಂದು ದೇಶವನ್ನು ಆಳುವ ಮಟ್ಟಿಗೂ ತಲುಪಿದೆ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದು ನಮ್ಮ ಪಾಲಿನ ಪುಣ್ಯ. ಕುಂಕುಮ ಅರಶಿನ ಫ್ಯಾಶನ್ ಅಲ್ಲ. ಅದು ನಮ್ಮ ಸಂಸ್ಕೃತಿಯಾಗಿದೆ. ಹೆಣ್ಣುಮಕ್ಕಳ ಹಣೆಯಲ್ಲಿ ಕುಂಕುಮ, ಕೈಗಳಿಗೆ ಬಳೆಗಳು, ಕಾಲ್ಬೆರಳಿಗೆ ಕಾಲುಂಗುರಗಳು, ಕುತ್ತಿಗೆಗೆ ಆಭರಣಗಳು ಭೂಷಣವೂ ಹೌದು ಆರೋಗ್ಯಕ್ಕೆ ಪೂರಕವೂ ಹೌದು ಎಂದರು. ಪೊಡಿಪ್ಪಳ್ಳ ಭಂಡಾರಮನೆಯ ರಾಜೀವಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟç ನಗರಪಾಲಿಕಾ ಸದಸ್ಯ ಸಂತೋಷ್ ಶೆಟ್ಟಿ ಮುಂಬೈ, ಪ್ರಮುಖರಾದ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಪಂ. ಅಧ್ಯಕ್ಷೆ ಯಶೋಧ ಎನ್., ಕಾರಡ್ಕ ಪಂ. ಅಧ್ಯಕ್ಷೆ ಜನನಿ, ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅನಿತಾ ಕಾಸರಗೋಡು, ವೀಣಾ ಅರುಣ್ ಶೆಟ್ಟಿ, ಪ್ರಮೀಳಾ ಮಜಲು ಪಾಲ್ಗೊಂಡಿದ್ದರು. ಲಕ್ಷಿö್ಮÃ ಮಾರ್ಪನಡ್ಕ ಸ್ವಾಗತಿಸಿ, ಚಂದ್ರಕಲಾ ನೆಟ್ಟಣಿಗೆ ವಂದಿಸಿದರು. ಪೊಡಿಪ್ಪಳ್ಳ ಶಾರದಾಂಬ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಬದಿಯಡ್ಕ ಮಂಡಲ ಕುಟುಂಬ ಸಂಗಮ ಸಂಯೋಜಕ ರಾಜೇಶ್ ಶೆಟ್ಟಿ ಕುಂಬ್ಡಾಜೆ ನಿರೂಪಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರಿಗೆ ಅರಶಿನ ಕುಂಕುಮವಿಟ್ಟು ಅಭಿನಂದಿಸಲಾಯಿತು.

You cannot copy contents of this page