ಕಾಸರಗೋಡು: ಬೋವಿಕ್ಕಾನದ ಅಡಿಕೆ ವ್ಯಾಪಾರಿ ಹಾಗೂ ಪೊವ್ವಲ್ ಪಳ್ಳದಲ್ಲಿ ವಾಸಿಸುವ ಎನ್.ಎ. ಸುಲೈಮಾನ್ ಹಾಜಿ (78) ನಿಧನ ಹೊಂದಿದರು. ಈ ಮೊದಲು ಸುಳ್ಯದಲ್ಲಿ ಅಡಿಕೆ ವ್ಯಾಪಾರಿಯಾಗಿದ್ದ ಇವರು ಇತ್ತೀಚೆಗೆ ಬೋವಿಕ್ಕಾನದಲ್ಲಿ ವ್ಯಾಪಾರ ಆರಂಭಿಸಿದ್ದರು. ಮೃತರು ಪತ್ನಿ ಅಸ್ಮಾ, ಮಕ್ಕಳಾದ ಉಮ್ಮರ್, ಶಂಸುದ್ದೀನ್, ಸೆಮೀರ, ಅಳಿಯ ಹನೀಫ್, ಸೊಸೆ ಯಂದಿರಾದ ತಂಸೀಂ, ಸಫಿಯ, ಸಹೋದರರಾದ ಅಬ್ದುಲ್ಲ, ಮುಹಮ್ಮದ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.






