ಅಡಿಮಾಲಿ: ಮದ್ಯಪಾನ ಮಧ್ಯೆ ಉಂಟಾದ ವಾಗ್ವಾದ ತಾರಕಕ್ಕೇರಿ ಸ್ವಂತ ತಮ್ಮನನ್ನು ಅಣ್ಣ ಇರಿದು ಕೊಲೆಗೈದ ಘಟನೆ ರಾಜ್ಯದ ಅಡಿಮಾಲಿ ಎಂಬಲ್ಲಿ ನಡೆದಿದೆ. ಅಡಿಮಾಲಿ ಬಳಿಯ ವೆಳ್ಳತ್ತೂವಲ್ ತೆಕ್ಕೆ ಶಲ್ಯಂಪಾರ ಪೈದಪ್ಲಾಯಿಕ್ಕಲ್ ಎಂಬಲ್ಲಿನ ಅನಿಲ್ (42) ಕೊಲೆಗೀಡಾದ ವ್ಯಕ್ತಿ.ಈ ಘಟನೆಗೆ ಸಂಬಂಧಿಸಿ ಇವರ ಅಣ್ಣ ಪ್ರಸಾದ್ (46)ನನ್ನು ವೆಳ್ಳತ್ತೂವಲ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ 6.30ರ ವೇಳೆ ಘಟನೆ ನಡೆದಿದೆ. ತಾಯಿಯನ್ನು ಕಾಣಲೆಂದು ಪ್ರಸಾದ್ ನೆಲ್ಲಿಯಾಂಬರ ಎಂಬಲ್ಲಿನ ತರವಾಡು ಮನೆಗೆ ಬಂದಿದ್ದನು. ಪ್ರಸಾದ್ ಬರುವಾಗಲೇ ಮದ್ಯ ಸೇವಿಸಿದ್ದನೆನ್ನಲಾಗಿದೆ. ಮನೆಗೆ ಬಂದ ಬಳಿಕ ಸಹೋದರನೊಂದಿಗೆ ಮತ್ತೆ ಮದ್ಯ ಸೇವಿಸಿದ್ದಾನೆ. ಈಮಧ್ಯೆ ಯಾವುದೋ ವಿಷಯಕ್ಕೆ ಸಂಬಂಧಿಸಿ ಇವರೊಳಗೆ ವಾಗ್ವಾದ ಉಂಟಾಯಿತು. ವಾಗ್ವಾದ ಹೊಡೆದಾಟಕ್ಕೆ ತಿರುಗಿದ್ದು, ಈ ವೇಳೆ ಭಯಗೊಂಡ ತಾಯಿ ಕೊಠಡಿಗೆ ನುಗ್ಗಿ ಬಾಗಿಲು ಹಾಕಿದ್ದಾರೆ.






