ಬಸ್‌ನಲ್ಲಿ 120 ಗ್ರಾಂ ಗಾಂಜಾ ಸಾಗಾಟ: ಜಾರ್ಖಂಡ್ ನಿವಾಸಿ ಸೆರೆ

ಮಂಜೇಶ್ವರ: ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿಯಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ ಜಾರ್ಖಂಡ್ ನಿವಾಸಿ ಸೆರೆಯಾಗಿದ್ದಾನೆ. ಲತೇಹಾರ್ ಜಿಲ್ಲೆಯ ಬಿಂಶುಬಂದ್ ರೇವಂತ್ ಕುರ್ದ್ ನಿವಾಸಿ ಆಶಿಶ್ ಕುಮಾರ್ ತಿವಾರಿ (24) ಸೆರೆಯಾದ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ವೇಳೆ ವಾಹನ ತಪಾಸಣಾನಿರತರಾಗಿದ್ದ ಅಬಕಾರಿ ದಳ ಅಧಿಕಾರಿಗಳು ಗಾಂಜಾ ಸಾಗಾಟ ಪತ್ತೆಹಚ್ಚಿದ್ದಾರೆ. ಈತನ ಕೈವಶ 120 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಆರೋಪಿ ಹಾಗೂ ಗಾಂಜಾವನ್ನು ಕುಂಬಳೆ ರೇಂಜ್‌ಗೆ ಹಸ್ತಾಂತರಿಸಲಾಗಿದೆ.

ಅಬಕಾರಿ ಇನ್ಸ್‌ಪೆಕ್ಟರ್ ಜಿನು ಜೇಮ್ಸ್‌ರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದ್ದು, ಪ್ರಿವೆಂಟಿವ್ ಆಫೀಸರ್ ಎಂ.ವಿ. ಜಿಜಿನ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸುನಿಲ್, ಸಜಿತ್ ಎಂಬಿವರು ಭಾಗವಹಿಸಿದರು.

You cannot copy contents of this page