1.500 ಕಿಲೋ ಗಾಂಜಾ ಸಹಿತ ಆರೋಪಿ ಸೆರೆ

ಹೊಸದುರ್ಗ:  ವಿವಿಧ ಸ್ಥಳಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ತಲುಪಿಸುವ ತಂಡದ ಪ್ರಧಾನ ಸೂತ್ರಧಾರನನ್ನು ಸೆರೆ ಹಿಡಿಯಲಾಗಿದೆ. ಮಾಡಾಯಿಪಾರ ಎಂಬ ಸ್ಥಳದಲ್ಲಿ ಚೆರುತಾಯಂ ಪಿರಕ್ಕಂತಡ ನಿವಾಸಿ ಅಫೀದ್ ಕೆ.ಪಿ. (21) ಎಂಬಾತನನ್ನು ಪಾಪಿನಿಶ್ಶೇರಿ ಅಬಕಾರಿ ಇನ್ಸ್‌ಪೆಕ್ಟರ್ ಜೆಸೀರಲಿ ಹಾಗೂ ತಂಡ ಸೆರೆ ಹಿಡಿದಿದೆ. ಅಬಕಾರಿ ಕಮಿಶನರ್ ತಂಡಕ್ಕೆ ನೀಡಿದ ರಹಸ್ಯ ಮಾಹಿತಿಯ ಆಧಾರದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. 1.500 ಕಿಲೋ ಗ್ರಾಂ ಒಣಗಿದ ಗಾಂಜಾವನ್ನು ಈತನಿಂದ ವಶಪಡಿಸಲಾಗಿದ್ದು, ಹೋಂಡಾ ಆಕ್ಟೀವ ಸ್ಕೂಟರ್ ಕಸ್ಟಡಿಗೆ ತೆಗೆಯ ಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈತನ ಚಲನವಲನಗಳ ಮೇಲೆ ಅಬಕಾರಿ ತಂಡ ಕಣ್ಣಿಟ್ಟಿದ್ದು, ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ಈಗ ಈತನನ್ನು ಸೆರೆ ಹಿಡಿಯಲಾಗಿದೆ.

RELATED NEWS

You cannot copy contents of this page