ಕಾಸರಗೋಡು: ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತು ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕಾಸರಗೋಡು ಅಬಕಾರಿ ಸ್ಪೆಶಲ್ ಸ್ಕ್ವಾಡ್ ಬಂಧಿಸಿದೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಶಹಬಾಸ್ ಮಂಜಿಲ್‌ನ ಹಸೈನಾರ್ ವಿ. (42) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 70.175 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದ ತಂಡ ಕಾಸರಗೋಡು ಅಡ್ಕತ್ತಬೈಲ್‌ನಲ್ಲಿ ನಡೆಸಿದ ಕಾರ್ಯಾ ಚರಣೆ ವೇಳೆ ಹಸೈನಾರ್‌ನ ಕೈಯಿಂದ ಎಂಡಿಎಂಎ ವಶಪಡಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್‌ಇನ್‌ಸ್ಪೆಕ್ಟರ್ ಸಿ.ಕೆ.ಇ. ಸುರೇಶ್, ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್, ಅತುಲ್ ಟಿ.ವಿ., ಶ್ರೀಜಿತ್ ವಿ.ವಿ., ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ಪಿ. ರಾಜೇಶ್, ಸುಧೀರ್, ಮಂಜುನಾಥನ್, ವಿ. ವಿನೀತಾ, ರೀನಾ ವಿ., ಕ್ರಿಸ್ಟಿನ್ ಸಿ.ಎ., ಮಹೇಶ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.






