ಕಾಸರಗೋಡು: ಎಂಡಿಎಂಎ ಹಾಗೂ ಗಾಂಜಾ ಸಹಿತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಣತ್ತೂರು ನೆಲ್ಲಿಕುನ್ನು ಪನ್ನಿಕುನ್ನು ನಿವಾಸಿ ಸಜಲ್‌ಶಾಜಿ (23) ಎಂಬಾತ ಬಂಧಿತ ಆರೋಪಿ. ಈತನನ್ನು ರಾಜಪುರಂ ಎಸ್‌ಐ ಕೆ. ಲತೀಶ್, ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ರ ಸ್ಕ್ವಾಡ್ ಸೆರೆ ಹಿಡಿದಿದೆ. ನಿನ್ನೆ ಸಂಜೆ ಪಾಣತ್ತೂರು ಬಸ್ ನಿಲ್ದಾಣದಿಂದ ಈತನನ್ನು ಸೆರೆ ಹಿಡಿಯಲಾಗಿದೆ. ಈತನ ಕೈಯಿಂದ 0.790 ಗ್ರಾಂ ಎಂಡಿಎಂಎ ಹಾಗೂ 6.740 ಗ್ರಾಂ ಗಾಂಜಾ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.
