ಕುಂಬಳೆ: ಕರ್ನಾಟಕ ಮದ್ಯ ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕುಡಾಲುಮೇರ್ಕಳ ಪರಪ್ಪ ನಿವಾಸಿ ಚಂದ್ರಹಾಸ (38) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ ಕರ್ನಾಟಕ ನಿರ್ಮಿತ 23 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕಯ್ಯಾರು ಚರ್ಚ್ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮದ್ಯ ಸಹಿತ ವ್ಯಕ್ತಿ ಸೆರೆಗೀಡಾಗಿದ್ದಾನೆ.
