ಕಾಸರಗೋಡು: ಜಿಲ್ಲೆಯ ಎರಡೆಡೆ ಗಳಲ್ಲಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯ ವಾದ ಎಂಡಿಎಂಎ ಸಹಿತ ಮೂವರನ್ನು ಬಂಧಿಸಿದ್ದಾರೆ. ನಗರದಕರಂದಕ್ಕಾಡ್ನಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಎಸ್ಐ ವಿಜಯನ್ ಮೇಲೋತ್ರ ನೇತೃತ್ವದಲ್ಲಿ ಜಿಲ್ಲಾ ಡ್ಯಾನ್ಸಾಪ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.510 ಗ್ರಾಂ ಎಂಡಿಎಂಎ ಸಹಿತ ಪಳ್ಳಿಕ್ಕರೆ ಪಳ್ಳಿಪುಳ ನಿವಾಸಿ ಗೋಕುಲ್ ರಾಜೀವ್ (25) ಎಂಬಾತನನ್ನು ಬಂಧಿಸಲಾಗಿದೆ. ಈ ಪೊಲೀಸರ ತಂಡ ಬೇರೊಂದು ಪ್ರಕರಣದ ತನಿಖೆಯ ಬಳಿಕ ವಿದ್ಯಾನಗರಕ್ಕೆ ಹಿಂತಿರುಗುತ್ತಿದ್ದ ವೇಳೆ ದಾರಿ ಮಧ್ಯೆ ಕರಂದಕ್ಕಾಡ್ಗೆ ತಲುಪಿ ದಾಗ ಅಲ್ಲಿ ಆರೋಪಿ ಪೊಲೀಸರನ್ನು ಕಂಡು ಅಸಹಜ ರೀತಿಯಲ್ಲಿ ವರ್ತಿಸುತ್ತಿ ರುವುದನ್ನು ಕಂಡು ಸಂಶಯದಿಂದ ಆತನನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಆತನ ಬ್ಯಾಗ್ನಲ್ಲಿ ಎಂಡಿಎಂಎ ಬಚ್ಚಿಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಆತನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ ನೀಲೇಶ್ವರ ಕೋಟ ಪುರಂ ಸೇತುವೆ ಬಳಿ ನೀಲೇಶ್ವರ ಪೊಲೀಸ್ ಠಾಣೆ ಎಸ್ಐ ಸುಮೇಶ್ ಬಾಬು ಸಿ.ರ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಸ್ಕೂಟರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿ ಸಿದಾಗ ಅದರಲ್ಲಿ 1.5 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಒಳಿಂಞ್ಞವಳಪು ಪೂಂಜಾವಿಯ ಸಲಾಂ ಖಲೀಲ್ (41) ಮತ್ತು ಪೂಂಜಾವಿ ಸದ್ದಾಮುಖ್ನ ಆಶಿಕ್ ಕೆ. (30) ಎಂಬವರನ್ನು ಬಂಧಿಸಿ ಅವರು ಸಂಚರಿಸುತ್ತಿದ್ದ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಳಿಕ ಬಂಧಿತರ ವಿರುದ್ಧ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕ ದ್ರವ್ಯ ಪತ್ತೆಗಾಗಿರುವ ಇಂತಹ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.






