ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕ್ಷೇತ್ರ ವಾದ್ಯ ಕಲಾವಿದ ಮೃತಪಟ್ಟರು. ಪುಲ್ಲೂರು ವಿಷ್ಣುಮಂಗಲ ನಿವಾಸಿಕೆ. ನಂದಕುಮಾರ್ ಮಾರಾರ್ (46) ಮೃತ ವ್ಯಕ್ತಿ. ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ನಿಧನ ಸಂಭವಿಸಿದೆ. ಇವರು ಕಳೆದ ೨೫ ವರ್ಷಗಳಿಂದ ಕ್ಷೇತ್ರ ವಾದ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ಗೋಪಾಲನ್ ಮಾರಾರ್-ದಿ| ಕಾರ್ತ್ಯಾಯಿನಿ ಮಾರಸ್ಯಾರ್ ದಂಪತಿ ಪುತ್ರನಾದ ಮೃತರು ಸಹೋದರಿ ಯರಾದ ಇಂದುಮತಿ, ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
