ಕಾಸರಗೋಡು: ಎಸ್‌ಐಆರ್ ನೋಟಿಫಿಕೇಶನ್ ಸಹಿತ ಚುನಾವಣೆ ಕ್ರಮಗಳಿಂ ದ ಕನ್ನಡವನ್ನು ಹೊರತುಪಡಿಸಿರುವುದು ಪ್ರತಿಭಟನಾರ್ಹವೆಂದು ಇದು ಕಾಸರಗೋಡು, ಮಂಜೇಶ್ವರ ತಾಲೂಕುಗಳ ಬಹುಪಾಲು ಕನ್ನಡ ಮತದಾರರಿಗೆ ಸಮಸ್ಯೆ ಸೃಷ್ಟಿಸುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂಎಲ್. ಅಶ್ವಿನಿ ಅಭಿಪ್ರಾ ಯಪಟ್ಟರು. ಎಸ್‌ಐಆರ್ ಚಟುವಟಿಕೆ ಆರಂಭಿಸಲಿರುವಂತೆ ನೋಟಿಫಿಕೇಶನ್ ಮಲಯಾಳ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯ ಔದ್ಯೋಗಿಕ ಪುಟದಲ್ಲಿ ಸಹಿತ ಸೂಚನೆಗಳು ಹಾಗೂ ನಿರ್ದೇಶಗಳು ಮಲ ಯಾಳದಲ್ಲಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಲಭ್ಯಗೊಳಿಸುವಂತೆ ಖಚಿತಪಡಿಸಬೇಕೆಂದು ಅಶ್ವಿನಿ ಆಗ್ರಹಿಸಿದ್ದಾರೆ.







