ಸುಟ್ಟು ಗಾಯಗೊಂಡಿದ್ದ ಕಾವುಗೋಳಿ ನಿವಾಸಿ ಎಎಸ್‌ಐ ಮಂಗಳೂರಿನಲ್ಲಿ ನಿಧನ

ಕಾಸರಗೋಡು: ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮೂಲತಃ ಕಾವುಗೋಳಿ ನಿವಾಸಿ ಹಾಗೂ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಎಎಸ್‌ಐ ಆಗಿರುವ ಹರಿಶ್ಚಂದ್ರ ಬೇರಿಕೆ (57) ನಿಧನಹೊಂದಿದರು.  ಇವರು ವಾಸಿಸುವ ಮಂಗಳೂರು ಕೆಪಿಟಿ ವ್ಯಾಸನಗರ  ಮನೆ ಬಳಿ ತರಗೆಲೆಗೆ ಬೆಂಕಿ ಹಚ್ಚಿದಾಗ ಅಕಸ್ಮಾತ್ ಬೆಂಕಿ ದೇಹಕ್ಕೆ ತಗಲಿ ಸುಟ್ಟು ಗಾಯಗೊಂಡಿದ್ದರು.  ಡಿಸೆಂಬರ್ ೨೮ರಂದು ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ನಿನ್ನೆ ನಿಧನ ಸಂಭವಿಸಿದೆ.

ಪಾಂಡೇಶ್ವರ ಠಾಣೆ, ಡಿವೈಎಸ್ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರಪೂರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಈಗ ಪಾಂಡೇಶ್ವರ ಠಾಣೆಯಲ್ಲಿ ಸೇವೆಯಲ್ಲಿದ್ದು ಕಳೆದ ೧೦ ವರ್ಷ ಹಿಂದೆ ಎಎಸ್‌ಐ ಆಗಿ ಭಡ್ತಿ ಹೊಂ ದಿದ್ದರು.ವಿವಿಧ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಸಕ್ರಿಯರಾಗಿ  ಭಾಗವಹಿಸುತ್ತಿದ್ದ ಇವರು ಸೇವೆಯಲ್ಲಿ ಪ್ರಾಮಾಣಿಕರಾಗಿ ದುಡಿಯುತ್ತಿದ್ದವರು ಎಂದು ಸಹೋ ದ್ಯೋಗಿಗಳು ನೆನಪಿಸಿಕೊಳ್ಳುತ್ತಿದ್ದಾರೆ.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page