ಕಾಸರಗೋಡು: ಕೋಳಿಮಾಂಸ ವಿತರಣೆ ಮಾಡಿದ ಬಾಬ್ತು ಪುತ್ರನಿಗೆ ಲಭಿಸಲಿರುವ ಹಣವನ್ನು ಕೇಳಿದ ವಿರೋಧವೆಂದು ಆರೋಪಿಸಲಾ ಗುತ್ತಿದ್ದು, ಚೆಂಗಳ ನಿವಾಸಿಯನ್ನು ಆಕ್ರಮಿಸಿ ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಚೆಂಗಳ ಪೊಡಿಪ್ಪಳ್ಳಂ ನೋರ್ತ್ ಬಂಬ್ರಾಣಿ ನಿವಾಸಿ ಎ ಮೊಹಮ್ಮದ್ ಕುಂಞಿ (70) ಆಕ್ರಮಣಕ್ಕೊಳಗಾದ ವ್ಯಕ್ತಿ. ಇವರು ನೀಡಿದ ದೂರಿನಂತೆ ಮೊಗ್ರಾಲ್ ಪುತ್ತೂರಿನ ರಿಯಾಸ್ ಎಂಬಾತನ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಬುಧವಾರ ರಾತ್ರಿ ೭.೪೫ರ ವೇಳೆ ತಾಯಲಂಗಾಡಿಯಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಪುತ್ರನಿಗೆ ನೀಡಲಿರುವ ಹಣವನ್ನು ಕೇಳಿದಾಗ ಹಿಡಿದು ದೂಡಿರುವು ದಾಗಿ ಯೂ, ಎದೆಗೆ ಹಾಗೂ ಹೊಟ್ಟೆಗೆ ಮೆಟ್ಟಿದ್ದು, ಕಬ್ಬಿಣದ ಸಲಾಖೆಯಿಂದ ಹೊಡೆದು ಕೊಲ್ಲು ವುದಾಗಿ ಬೆದರಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.






