ಕಾಸರಗೋಡು: ತಳಂಗರೆಯಲ್ಲಿ ಬಸ್ಸಿಗೆ ಹತ್ತಿ ಕಂಡಕ್ಟರ್ಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಇದನ್ನು ಪ್ರತಿಭಟಿಸಿ ಕಾಸರಗೋಡು-ತಳಂಗರೆ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ಗಳು ಇಂದು ಬೆಳಿಗ್ಗೆ ದಿಢೀರ್ ಮುಷ್ಕರ ನಡೆಸಿದವು.
ಹಲ್ಲೆಯಿಂದ ಗಾಯಗೊಂಡ ಕಲ್ಲಕಟ್ಟ ನಿವಾಸಿ ಮುಹಮ್ಮದ್ ಸಾಲಿಹ್ (36)ರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ೮.೪೫ರ ವೇಳೆಗೆ ತಳಂಗರೆ ಮಾಲಿಕ್ ದೀನಾರ್ ಬಸ್ ಸ್ಟಾಪ್ನಲ್ಲಿ ನಿಲ್ಲಿಸಿದ್ದ ರಾಹಿ ಡಿಲಕ್ಸ್ ಬಸ್ನ ಕಂಡಕ್ಟರ್ಗೆ ಹಲ್ಲೆಗೈಯ್ಯ ಲಾಗಿದೆ. ಓರ್ವ ಆಟೋ ಚಾಲಕ ಹಲ್ಲೆಗೈದಿರುವುದಾಗಿ ಸಾಲಿಹ್ ಆರೋಪಿಸಿದ್ದಾರೆ. ಸ್ಕ್ರೂ ಡ್ರೈವರ್ ಉಪಯೋಗಿಸಿ ಕೈಗೆ ಇರಿದು ಬಳಿಕ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಬಸ್ಪ್ರಯಾಣಿ ಕರನ್ನು ಸಾಗಿಸುವ ವಿಷಯಕ್ಕೆ ಸಂಬಂಧಿಸಿದ ತರ್ಕವೇ ಘರ್ಷಣೆಗೆ ಕಾರಣವೆಂದು ಪೊಲೀಸರು ಹೇಳುತ್ತಿದ್ದಾರೆ. ಈ ಹಿಂದೆಯೂ ಬಸ್ ನೌಕರರ ಮೇಲೆ ಹಲ್ಲೆ ನಡೆದಿತ್ತು. ಇಂದು ಬೆಳಿಗ್ಗೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಅನಿರೀಕ್ಷಿತವಾಗಿ ಬಸ್ ಸಂಚಾರ ನಿಲುಗಡೆಗೊಳಿರುವುದರಿಂದ ವಿದ್ಯಾರ್ಥಿಗಳು ಸಹಿತ ಸಾರ್ವಜ ನಿಕರು ತೀವ್ರ ಸಮಸ್ಯೆಗೊಳಗಾಗಿದ್ದಾರೆ.






