ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ವತಿಯಿಂದ ಪಚ್ಲಂಪಾರೆಯಲ್ಲಿ ಪಟ್ಟತ ಮೊಗರು ಅರಸು ವೇದಿಕೆ ಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಕ್ರೀಡಾಕೂಟ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಬಾಬು. ಯು. ಪಚ್ಲಂಪಾರೆ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ದೈವಸ್ಥಾನದ ಗುರಿಕಾರರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ. ಯು. ಮಂಜೇಶ್ವರ, ಮಹೇಶ್ ಬಂಗ್ಲೆಗುಡ್ಡೆ ಸುಳ್ಯ, ಕರಿಯ ಉಪ್ಪಳ. ಭಾಸ್ಕರ ಬಲ್ಮಠ, ಗುರುವಪ್ಪ ಟೈಲರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮೊಗೇರ ಸಮುದಾಯದ ಪ್ರತಿಭೆಗಳಾದ ಅಂತರ್ ರಾಷ್ಟ್ರೀಯ ಸಾಫ್ಟ್ ಬೇಸ್ ಬಾಲ್ ಆಟಗಾರ್ತಿ ಯರಾದ ಅಶ್ವಿನಿ ಬಾಯಾರು. ಹಾಗೂ ಶ್ರಾವ್ಯ ಕನಿಯಾಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪಿಸಿಯೋಥೆರಪಿ ಗೋಲ್ಡ್ ಮೆಡಲಿಸ್ಟ್ ಡಾ.ಅತುಲ್ಯ. ಪಿ. ಕೆ. ಕುಬಣೂರು ಇವರನ್ನು ಸನ್ಮಾನಿಸಲಾಯಿತು. ಬಳಿಕ ಆಟಿ ತಿಂಗಳ ಖಾದ್ಯಗಳನ್ನು ವಿತರಿಸಲÁಯಿತು. ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು. ಸಮಿತಿಯ ಸದಸ್ಯರಾದ ನಾರಾಯಣ. ಕೆ. ಯು. ಸ್ವಾಗತಿಸಿ.ಆದರ್ಶ ಪಟ್ಟತ ಮೊಗರು ನಿರೂಪಿಸಿದರು.
