ಹೊಸದುರ್ಗ: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಗೊಂಡ ಯುವತಿಗೆ ಹಲವು ರೀತಿಯಲ್ಲಿರುವ ಭರವಸೆಗಳನ್ನು ನೀಡಿ ಹಲವಾರು ಬಾರಿ ದೌರ್ಜನ್ಯಗೈದ ಯುವಕ ಸೆರೆಯಾಗಿದ್ದಾನೆ. ವಳಪಟ್ಟಣಂ ಪಾಪಿನಶ್ಶೇರಿ ವೆಲ್ಫೇರ್ ಶಾಲೆಯ ಬಳಿಯಿರುವ ರಾಸಿಕ್ (೩೮)ನನ್ನು ವಳಪಟ್ಟಣಂ ಸರ್ಕಲ್ ಇನ್ಸ್‌ಪೆಕ್ಟರ್ ಪಿ. ವಿಜೇಶ್‌ರ ನೇತೃತ್ವದಲ್ಲಿರುವ ತಂಡ ಸೆರೆ ಹಿಡಿದಿದೆ. ಆರೋಪಿಯನ್ನು ತಿರುವನಂತಪುರ, ಮಲಯಿನ್‌ಕೀಳ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ರಾಸಿಕ್ ಮಲಯನ್‌ಕೀಳ್ ನಿವಾಸಿಯಾದ ೩೭ರ ಹರೆಯದ ಯುವತಿಯನ್ನು ಪರಿಚಯಗೊಂಡಿದ್ದನು. ಬಳಿಕ ಈಕೆಯ ಜೊತೆ ಸಲುಗೆ ಬೆಳೆಸಿ ಹಲವು ರೀತಿಯ ಭರವಸೆಗಳನ್ನು ನೀಡಿದ ಈತ ಕೊನೆಗೆ ಆಕೆಯ ಊರಿಗೆ ತಲುಪಿದನು. ನೇರವಾಗಿ ಭೇಟಿಯಾದ ಬಳಿಕ ಹಲವು ಸ್ಥಳಗಳಿಗೆ ಕರೆದೊಯ್ದಿದ್ದು, ಅಲ್ಲಿ ದೌರ್ಜನ್ಯಗೈದಿದ್ದಾನೆ. ಅದರ ಬಳಿಕ ಭರವಸೆಯಿಂದ ಹಿಂಜರಿದಿ ರುವುದಾಗಿಯೂ ಈ ಹಿನ್ನೆಲೆಯಲ್ಲಿ ಯುವತಿ ದೂರು ನೀಡಿದ್ದಾಳೆ. ಈ ವಿಷಯವನ್ನು ಮಲಯನ್‌ಕೀಳ್ ಪೊಲೀಸರು ವಳಪಟ್ಟಣಂ ಸಿಐಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದ ಮಧ್ಯೆ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.







