ಪಾಲಕ್ಕಾಡ್: ಕಳ್ಳನೆಂದು ಆರೋಪಿಸಿ ತಂಡವೊಂದು ನಡೆ ಸಿದ ಹಲ್ಲೆಯಿಂದ ಗಾಯಗೊಂಡು ಅನ್ಯ ರಾಜ್ಯ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಛತ್ತೀಸ್‌ಗಡದ ಬಿಲಾಸ್‌ಪುರ್ ನಿವಾಸಿ ರಾಮ್ ನಾರಾಯಣ್ ಬಯ್ಯಾರ್ (31) ಮೃತಪಟ್ಟ ಯುವಕನಾಗಿದ್ದಾನೆ. ಮೊನ್ನೆ ಸಂಜೆ ವಾಳಯಾರ್‌ನಲ್ಲಿ ಘಟನೆ ನಡೆದಿದೆ. ಕಳ್ಳನೆಂದು ಆರೋಪಿಸಿ ಯುವಕನಿಗೆ ತಂಡವೊಂದು ಹಲ್ಲೆಗೈದು ಗಂಭೀರ ಗಾಯಗೊಳಿಸಿತ್ತು. ಇದರಿಂದ ಅಸ್ವಸ್ಥಗೊಂಡ ರಾಮ್ ನಾರಾಯಣನ್‌ನನ್ನು ಪಾಲಕ್ಕಾಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಈತ ಮೃತಪಟ್ಟನು. ಘಟನೆಗೆ ಸಂಬಂಧಿಸಿ 10 ಮಂದಿಯನ್ನು ವಾಳಯಾರ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ತೃಶೂರು ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದ್ದು, ಇದರಲ್ಲಿ ಸಾವಿಗೆ ಕಾರಣ ಏನೆಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.






