ಪೈವಳಿಕೆ: ಕಯ್ಯಾರು ಗ್ರಾಮದ ಅಟ್ಟೆಗೋಳಿ ಯೂತ್ ಕ್ಲಬ್ ಗ್ರಂಥಾಲಯ ಹಾಗೂ ವಾಚನಾಲಯ ಆಡಳಿತ ಸಮಿತಿಯನ್ನು ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್‌ನ ನಿರ್ದೇಶದ ಪ್ರಕಾರ ಮೂರು ವರ್ಷದ ಕಾಲಾವಧಿಗೆ ರೂಪೀಕರಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಕುಶಲ, ಉಪಾಧ್ಯಕ್ಷರಾಗಿ ಮೊಹಮ್ಮದ್ ಬಶೀರ್ ಮಾಸ್ತರ್, ಕಾರ್ಯದರ್ಶಿಯಾಗಿ ಉಮೇಶ ಎ, ಜತೆ ಕಾರ್ಯದರ್ಶಿಯಾಗಿ ರಮೇಶ್ ಎ.ಎಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹಮ್ಮದ್ ಹುಸೈನ್ ಮಾಸ್ತರ್, ಪ್ರೊಫೆಸರ್ ಪಿ.ಎನ್. ಮೂಡಿತ್ತಾಯ, ಅಬ್ದುಲ್ ಗಫೂರ್, ಸಂಧ್ಯಾ, ಮೊಹಮ್ಮದ್ ಪೊಡಿಮೋನು, ಲಿನೆಟಾ ಕ್ರಾಸ್ತ, ಮೊಹಮ್ಮದ್ ಆಶಿಕ್, ಅಟ್ಟೆಗೋಳಿ ಎಎಲ್‌ಪಿ ಶಾಲೆ ಮುಖ್ಯೋಪಾಧ್ಯಾಯಿನಿ ಅನಿತ ಶೆಟ್ಟಿ, ಶಿವರಾಮ ಆಚಾರ್ಯ, ಜೋಸ್ಟಿನ್ ಡಿಸೋಜ, ಸರಸ್ವತಿ ಎಂಬಿವರನ್ನು ಆರಿಸಲಾಯಿತು.







