ಬಿಎಸ್‌ಎನ್‌ಎಲ್ ಕೇಬಲ್ ಕತ್ತರಿಸಿ ಸಾಗಿಸಲೆತ್ನ: ಇಬ್ಬರು ಅಸ್ಸಾಂ ನಿವಾಸಿಗಳ ಸೆರೆ

ಕಾಸರಗೋಡು: ಬಿಎಸ್‌ಎನ್ ಎಲ್‌ನ ಕೇಬಲ್‌ನ್ನು ಕತ್ತರಿಸಿ ಸಾಗಿಸಲೆತ್ನಿಸಿದ ಆರೋಪದಂತೆ ಅಸ್ಸಾಂ ನಿವಾಸಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ನಿವಾಸಿಗಳಾದ ಶಾಹಿರುಲ್ ಇಸ್ಲಾಂ (29) ಮತ್ತು ಅಮೀರುಲ್ ಇಸ್ಲಾಂ (3೦) ಬಂಧಿತ ಆರೋಪಿಗಳು, ಭೀಮ ನಡಿ ಸೇತುವೆ ಬಳಿ ಚಿತ್ತಾರಿಕ್ಕಲ್ ಪೊಲೀಸರು ವಾಹನದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಆ ಸೇತುವೆ ಬಳಿ ಆರೋಪಿ ಗಳಿಬ್ಬರು ಕೇಬಲ್ ಕತ್ತರಿಸುತ್ತಿರುವುದನ್ನು ಕಂಡು ತಕ್ಷಣ ಅವರಿಬ್ಬರನ್ನು ಸೆರೆಹಿಡಿದು  ಪ್ರಕರಣ ದಾಖಲಿಸಿಕೊಂಡರು.

You cannot copy contents of this page