ಕುಂಬಳೆ:ಗೃಹ ಪ್ರವೇಶ ಕಾರ್ಯಕ್ರಮಕ್ಕೆ ತಲುಪಿದ ಹನ್ನೊಂದರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಆರೋಪ ದಂತೆ ಮುಖ್ಯೋಪಾಧ್ಯಾಯನನ್ನು ಕುಂಬಳ ಪೊಲೀಸರು ಪೋಕ್ಸೋ ಪ್ರ ಕಾರ ಕೇಸು ದಾಖಲಿಸಿ ಬಂಧಿಸಿದ್ದಾರೆ.
ಕಣ್ಣೂರು ಬ್ಲಾತೂರು ನಿವಾಸಿಯಾದ ಸುಧೀರ್ (48) ಸೆರೆಗೀಡಾದ ಆರೋಪಿ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಸುಧೀರ್ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಐಡೆಡ್ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿದ್ದಾನೆ. ಇತ್ತೀಚೆಗೆ ಸೀತಾಂಗೋಳಿ ಸಮೀಪ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.
ದೂರುದಾತೆಯಾದ ಬಾಲಕಿಗೆ ಆರೋಪಕ್ಕೆಡೆಯಾದ ಸುಧೀರ್ ಮೂರನೇ ತರಗತಿ ವರೆಗೆ ಪಾಠ ಹೇಳಿಕೊಟ್ಟಿದ್ದನೆನ್ನಲಾಗಿದೆ. ಈ ಮೂಲಕ ಪರಿಚಯಗೊಂಡಿದ್ದ ಬಾಲಕಿಯನ್ನು ಗೃಹಪ್ರವೇಶ ಕಾರ್ಯಕ್ರಮ ನಡೆಯುವ ಮನೆಯ ಸಮೀಪದಿಂದ ಕರೆದೊಯ್ದು ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಬಾಲಕಿಯಿಂದ ಗುಪ್ಕವಾಗಿ ಹೇಳಿಕೆ ಸಂಗ್ರಹಿ ಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.







