ಜಿಲ್ಲೆಯ ವೋಟರ್ ಡಿಲೀಶನ್ ಪ್ರಕ್ರಿಯೆ ಬುಡಮೇಲುಗೊಳಿಸಲು ಯತ್ನ-ಎಂ.ಎಲ್. ಅಶ್ವಿನಿ

ಕಾಸರಗೋಡು: ತಮ್ಮ ಭದ್ರ ಕೋಟೆಗಳಲ್ಲಿ ವೋಟರ್ ಡಿಲೀಶನ್ ಪ್ರಕ್ರಿಯೆಯನ್ನು ಬುಡಮೇಲು ಗೊಳಿಸಲು ಲೀಗ್, ಎಸ್‌ಡಿಪಿಐ, ಸಿಪಿಎಂ ಯತ್ನಿಸುತ್ತಿದೆ ಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಅವಳಿ ಮತಗಳು, ವಿವಾಹದ ಬಳಿಕ ಬದಲಾಗಿ ಹೋದ ಮಹಿಳೆಯರು ಎಂಬಿವರ ಮಾಹಿತಿ ಗಳನ್ನು ಲಿಖಿತವಾಗಿ ಸ್ಪಷ್ಟವಾಗಿ ಸಲ್ಲಿಸಿದರೂ ಅವರನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗಿಲ್ಲ. ವರ್ಕಾಡಿ ಪಂಚಾಯತ್‌ನಲ್ಲಿ ೧೦೦ರಷ್ಟು ಮತಗಳು ತೆರವುಗೊಳಿಸಲಿದೆ. ಇವರನ್ನು ತೆರವುಗೊಳಿಸಬೇಕೆಂದು ಅರ್ಜಿ ನೀಡಿದ  ಬಿಜೆಪಿ ಮುಖಂಡ ರನ್ನು ಹಾಗೂ ಕಾರ್ಯಕರ್ತರನ್ನು, ಪಂಚಾಯತ್ ಅಧಿಕಾರಿಗಳನ್ನು ಎಸ್‌ಡಿಪಿಐ-ಲೀಗ್ ಮುಖಂಡರು ಬೆದರಿಕೆಯೊಡ್ಡಿ  ಮುಂದಿನ ಕ್ರಮಗಳಿಗೆ ತಡೆಯೊಡ್ಡಿದ್ದಾರೆ.

ದೇಲಂಪಾಡಿ ಪಂಚಾಯತ್‌ನಲ್ಲಿ ಹಾಲಿ ಜನಪ್ರತಿನಿಧಿ  ಸುರೇಂದ್ರನ್‌ರ ನೇತೃತ್ವದಲ್ಲಿ ಸಿಪಿಎಂ ಮುಖಂಡರು ಫೋನ್ ಮೂಲಕ ಹಾಗೂ ನೇರವಾಗಿ ಬಿಜೆಪಿ ಕಾರ್ಯಕರ್ತರಿಗೆ ಕೊಲೆಬೆದರಿಕೆಯೊಡ್ಡಿದ್ದಾರೆ ಎಂದು ಅವರು ಆರೋಪಿಸಿದರು. ಡಿಲೀಶನ್ ಪ್ರಕ್ರಿಯೆಯಲ್ಲಿ ಹಾಜರಾಗುವವರನ್ನು ಅಪಾಯ ಪಡಿಸಲಾಗುವುದೆಂದು ಬೆದರಿಕೆಯೊಡ್ಡಲಾಗಿದೆ. ೪೦ ವರ್ಷಗಳ  ಹಿಂದೆ ವಾಸಬದಲಿಸಿದ ವರನ್ನು ಕೂಡಾ ತೆರವುಗೊಳಿಸದ ಸನ್ನಿವೇಶವಿದೆ. ಸತತವಾಗಿ ಬೆದರಿಕೆ ಯೊಡ್ಡುವುದರಿಂದಾಗಿ ದೇಲಂಪಾಡಿ ಪಂಚಾಯತ್ ಕಾರ್ಯದರ್ಶಿ ಹೆಚ್ಚಿನ ದಿನಗಳಲ್ಲ್ಲಿ ರಜೆ ಪಡೆಯುತ್ತಿದ್ದಾರೆನ್ನ ಲಾಗಿದೆ. ಸಿಪಿಎಂನ ಭಾಗದಿಂದಿರುವ ಒತ್ತಡದ ಕಾರಣ ಹೀಯರಿಂಗ್ ಕ್ರಮ ಮೊಟಕುಗೊಳಿಸಬೇಕಾದ ಸಂದರ್ಭವೂ ಉಂಟಾಗಿರುವುದಾಗಿ ಅಶ್ವಿನಿ ಆರೋಪಿಸಿದರು. ಮುಳಿಯಾರು ಪಂಚಾಯತ್‌ನಲ್ಲಿ ಸಿಪಿಎಂನ ಜಯ ಖಚಿತಪಡಿಸಲು ವಾರ್ಡೊಂದರಿಂದ ೫೦ರಷ್ಟು ಮತಗಳನ್ನು ತೆರವುಗೊಳಿಸಲಾಗಿದೆ. ಮತದಾರರ ಪಟ್ಟಿ ಪ್ರಕಟಿಸಬೇಕಾದ ಕೊನೆಯ ಹಂತದಲ್ಲಿ ಸಿಪಿಎಂ, ಕಾಂಗ್ರೆಸ್, ಲೀಗ್, ಎಸ್‌ಡಿಪಿಐ ಪಕ್ಷಗಳ ಹಲವು ವಿಧದಲ್ಲಿರುವ ಒತ್ತಡಗಳು, ಬೆದರಿಕೆಗಳಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲುಗೊಳ್ಳುವ ಸ್ಥಿತಿಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿಭಟನೆಗಿಳಿ ಯುವುದಾಗಿ ಅಶ್ವಿನಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಕುಂಬಳೆ ಜಲವಿತರಣೆ ಸಮಸ್ಯೆ ತುರ್ತು ಪರಿಹಾರಕ್ಕೆ ಎಂ.ಎಲ್. ಅಶ್ವಿನಿ ಆಗ್ರಹ

ಕುಂಬಳೆ:  ಕುಂಬಳೆ ಪೇಟೆ ಸಹಿತ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ವಿತರಣೆ ಮೊಟಕುಗೊಂಡು ಹಲವು ದಿನಗಳು ಕಳೆದರೂ ಜಲಪ್ರಾಧಿಕಾರ  ಸೂಕ್ತ ಕ್ರಮ ಕೈಗೊಳ್ಳದಿರುವುದು ಪ್ರತಿಭಟನಾರ್ಹ ವಾಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಜಲವಿತರಣೆ ಮೊಟಕಿಗಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿ ಶುದ್ಧ ಜಲ ವಿತರಣೆ ಪುನರ್ ಸ್ಥಾಪಿಸಬೇಕೆಂದು ಅವರು ಆಗ್ರಹಿಸಿದರು.

ಎಣ್ಮಕಜೆ ಪಂಚಾಯತ್‌ನಲ್ಲಿ ಜಲ ಲಭ್ಯವಾಗದ ಸಮಯದಲ್ಲಿ ಕೂಡಾ  ಮೀಟರ್  ಓಡುತ್ತಿರುವುದಾಗಿ ದೂರಲಾ ಗುತ್ತಿದೆ. ಜನಸಾಮಾನ್ಯರ ಮನೆಗಳಿಗೆ   ದೊಡ್ಡ ಮೊತ್ತದ ಬಿಲ್ ತಲುಪುತ್ತಿದ್ದು ವಾಟರ್ ಮೀಟರ್, ಬಿಲ್‌ನ ಲೋಪದೋಷ ಗಳನ್ನು ಕೂಡಲೇ ಪರಿಹರಿಸಲು ಕ್ರಮ ಉಂಟಾಗಬೇಕೆಂದು ಅಶ್ವಿನಿ ಆಗ್ರಹಿಸಿದ್ದಾರೆ.

RELATED NEWS

You cannot copy contents of this page