ಮುಳ್ಳೇರಿಯ: ಯುವತಿಯನ್ನು ಮಾನಭಂಗಗೊಳಿಸಲು ಯತ್ನಿಸಿದ ಪ್ರಕರಣದಂತೆ ನೀಡಿದ ದೂರಿನಲ್ಲಿ ಓರ್ವನನ್ನು ಬಂಧಿಸಲಾಗಿದೆ. ಚಾಮಕೊಚ್ಚಿ ನಿವಾಸಿ ನಾರಾಯಣ (42) ಸೆರೆಯಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದೆ. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವೆಗೆ ಲಾಟರಿ ಮಗುಚಿದ್ದು ಈ ಹಣವನ್ನು ಏಜೆಂಟ್ ಯುವತಿಗೆ ನೀಡಲು ನಾರಾಯಣನಲ್ಲಿ ನೀಡಿದ್ದರೆನ್ನಲಾಗಿದೆ.
ಈ ಹಣವನ್ನು ಯುವತಿಗೆ ನೀಡಲು ತೆರಳಿದಾಗ ಯುವತಿಯನ್ನು ಮಾನಭಂಗ ಪಡಿಸಿರುವುದಾಗಿ ಆದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.







