ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಕುಂಬಳೆ: ಬದಿಯಡ್ಕದ ಮೀನು  ಮಾರಾಟಗಾರನಾದ ಅನಿಲ್ ಕುಮಾರ್ (40)ರಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ೭ನೇ ಆರೋಪಿಯನ್ನು ಬಂಧಿಸಲಾಗಿದೆ. ಮಧೂರು ಪಟ್ಲ ನಿವಾಸಿ ಪನ್ನಿಯೂರ್ ಹೌಸ್‌ನ ಕೆ. ರಾಮಚಂದ್ರ (55) ಎಂಬಾತನನ್ನು ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ  ಈ ಹಿಂದೆ 6 ಮಂದಿಯನ್ನು ಬಂಧಿಸಲಾಗಿತ್ತು. ಅಕ್ಟೋಬರ್ ೫ರಂದು ರಾತ್ರಿ ಸೀತಾಂಗೋಳಿ ಪೇಟೆಯಲ್ಲಿ  ಘಟನೆ ನಡೆದಿದೆ. ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ನಡೆದ ತರ್ಕದ ಮಧ್ಯೆ ಅನಿಲ್ ಕುಮಾರ್‌ರನ್ನು ಇರಿದು ಕೊಲೆಗೈಯ್ಯಲು ಯತ್ನಿಸಲಾಗಿತ್ತು. ಅನಿಲ್ ಕುಮಾರ್‌ರ ಕುತ್ತಿಗೆಗೆ ಇರಿಯಲಾದ ಚಾಕುವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಲಾಗಿತ್ತು. ಘಟನೆಗೆ ಸಂಬಂಧಿಸಿ ೧೩ ಮಂದಿ ವಿರುದ್ಧ ಕುಂಬಳೆ ಪೊಲೀಸರು ಹತ್ಯಯತ್ನ ಕೇಸು ದಾಖಲಿಸಿಕೊಂ ಡಿದ್ದಾರೆ. ಮುಖ್ಯ ಆರೋಪಿ ಬೇಳ ಚೌಕಾರು ಹೌಸ್  ನಿವಾಸಿ ಅಕ್ಷಯ್ ನನ್ನು ಮೊದಲು ಸೆರೆಹಿಡಿಯಲಾಗಿತ್ತು. ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್, ಹರಿಕೃಷ್ಣನ್, ಅಜಿತ್ ಕುಮಾರ್ ಎಂಬಿವರನ್ನು ಬಳಿಕ ಬಂಧಿಸಲಾಗಿತ್ತು. ಇನ್ನು ೬ ಮಂದಿಯನ್ನು ಸೆರೆಹಿಡಿಯಲು ಬಾಕಿಯಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page