ಕುಂಬಳೆ: ಪಚ್ಚಂಬಳ ಸಫಾ ನಗರದಲ್ಲಿ ಮನೆಯೊಡೆಯನಿಗೆ ಇರಿದು ಕೊಲೆಗೈಯ್ಯಲೆತ್ನಿಸಿ ಇತರ ಮೂರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೂಪೀಕರಿಸಿದ ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ. ಆರೋಪಿಗಳಾದ ಸಫ ನಗರದ ಇರ್ಷಾದ್ ಯಾನೆ ಲುಟಾಪಿ, ಈತನ ಸಹೋದರ ದಿಲ್ಶಾದ್ ಎಂಬಿವರು ಜಿಲ್ಲೆಯಿಂದ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇವರು ವಯನಾಡಿನಲ್ಲಿದ್ದಾರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಿಐ ಆರ್.ಪಿ. ಅನೂಪ್ಕೃಷ್ಣ, ಎಸ್ಐ ಎಸ್. ಅನೂಪ್ ಎಂಬಿವರ ನೇತೃತ್ವದ ತಂಡ ಅಲ್ಲಿಗೆ ತೆರಳಿ ಶೋಧ ನಡೆಸುತ್ತಿದೆ. ಇರಿತದಿಂದ ಗಂಭೀರ ಗಾಯಗೊಂಡ ಸಫಾ ನಗರದ ಮುಹಮ್ಮದ್ (63) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನವಂಬರ್ 4ರಂದು ಮುಂಜಾನೆ 1 ಗಂಟೆಗೆ ಘಟನೆ ನಡೆದಿತ್ತು. ಥಾರ್ ಜೀಪಿನಲ್ಲಿ ತಲುಪಿದ ಇರ್ಷಾದ್ ಹಾಗೂ ಸಹೋದರ ಸೇರಿ ಸಫಾ ನಗರದ ಎಸ್.ಎ. ಶೆರೀಫ್, ಸ್ನೇಹಿತರಾದ ರಫೀಕ್, ಮುಹಮ್ಮದ್ ನವಾಸ್ ಎಂಬಿವರಿಗೂ ಇರಿದಿದ್ದರು. ಶೆರೀಫ್ರ ಎದೆಗೆ, ನವಾಸ್ರ ಸೊಂಟಕ್ಕೆ ಹಾಗೂ ರಫೀಕ್ರ ಕಾಲಿಗೆ, ಮುಹಮ್ಮ ದ್ರ ಹೊಟ್ಟೆಗೆ ಇರಿದು ಗಾಯಗೊಳಿ ಸಲಾಗಿದೆ. ಒಂದನೇ ಆರೋಪಿ ಚಾಕುವಿ ನಿಂದ ಇರಿದಿದ್ದು, ಎರಡನೇ ಆರೋಪಿ ತಲವಾರು ಬೀಸಿ ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಶೆರೀಫ್ರ ಬೈಕ್ ತೆಗೆದಿರುವುದನ್ನು ಪ್ರಶ್ನಿಸಿದ ದ್ವೇಷವೇ ಇರಿದು ಗಾಯಗೊಳಿಸಲು ಕಾರಣವೆಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿ ಇರ್ಷಾದ್ನ ವಿರುದ್ಧ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.






