ಕಟ್ಟಡದಿಂದ ಬಿದ್ದು ವ್ಯಾಪಾರಿ ಸಾವಿಗೀಡಾದ ಪ್ರಕರಣ: ಗುತ್ತಿಗೆದಾರನ ಬಂಧನ ಬೆನ್ನಲ್ಲೇ ಪುತ್ರ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಅದರ ಮಾಲಕನಾದ ವ್ಯಾಪಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸೆರೆಗೀಡಾದ ಗುತ್ತಿಗೆದಾರನ ಪುತ್ರ ಕೆರೆಯಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪುಲ್ಲೂರು ಪುಳಿಕ್ಕಾಲ್‌ನ ನರೇಂದ್ರನ್ ಎಂಬವರ ಪುತ್ರ ಕಾಶೀನಾಥನ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನೆ ಸಂಜೆ ಕಾಶೀನಾಥನ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆ ಯಲ್ಲಿ ಸಂಬಂಧಿಕರು ಶೋಧ ನಡೆಸು ತ್ತಿದ್ದ ವೇಳೆ ಪುಲ್ಲೂರು ಕ್ಷೇತ್ರ ಸಮೀ ಪದ ಕೆರೆ ಬಳಿ ಕಾಶೀನಾಥನ್‌ನ ಬಟ್ಟೆಬರೆ, ಚಪ್ಪಲಿ ಕಂಡುಬಂದಿತ್ತು. ಇದರಿಂದ ನಾಗರಿಕರು ಹಾಗೂ ಅಗ್ನಿಶಾಮಕದಳ …