ಕುಂಬಳೆಯ ಯುನಾನಿ ಆರೋಗ್ಯ ಕೇಂದ್ರವನ್ನು ಆಶ್ರಯಿಸುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ : ಈ ವರ್ಷ 32 ಲಕ್ಷ ರೂಪಾಯಿಗಳ ಔಷಧಿ ಖರೀದಿ
ಕುಂಬಳೆ: ಯುನಾನಿ ಚಿಕಿತ್ಸೆ ಫಲಪ್ರದವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿರುವ ರಾಜ್ಯದ ಏಕೈಕ ಸರಕಾರಿ ಯುನಾನಿ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಿದ್ದಾರೆ. ಇದರಿಂದ ಈ ವರ್ಷ ಆರಂಭದಲ್ಲಿ ಔಷಧಿ ಕ್ಷಾಮ ಎದುರಿಸಬೇಕಾಗಿ ಬಂದಿತ್ತು. ಡಿಸ್ಪೆನ್ಸರಿಯ ಆಡಳಿತ ಹೊಣೆಗಾರಿಕೆಯುಳ್ಳ ಕುಂಬಳೆ ಪಂಚಾಯತ್ ಔಷಧಿ ಖರೀದಿಸಲು 2 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. 2025-26ನೇ ಹಣಕಾಸು ವರ್ಷದಲ್ಲಿ 32 ಲಕ್ಷ ರೂಪಾಯಿಗಳ ಔಷಧಿ ರೋಗಿಗಳಿಗೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಕ್ಷಾಮ ಕಂಡುಬಂದ ಬಗ್ಗೆ ಮೆಡಿಕಲ್ ಆಫೀಸರ್ ಡಾ| ಶಕೀರ್ …