ಬಿಲ್ಡಿಂಗ್ ಕಾಂಟ್ರಾಕ್ಟರ್ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಾಂಟ್ರಾಕ್ಟರ್ ವೆಂಕ ಟೇಶ್(58) ನಿಧನ ಹೊಂದಿದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಇವರು ನಿನ್ನೆ ಬೆಳಿಗ್ಗೆ ಎದ್ದಾಗ ಹೃದಯಾಘಾತ ವುಂಟಾಗಿದ್ದು, ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಧ್ಯೆ ಮೃತಪಟ್ಟಿದ್ದಾರೆ. ಹೊಸಂಗಡಿ ಪೇಟೆಯಲ್ಲಿ ಬಿಲ್ಡಿಂಬ್ ಕಾಂಟ್ರಾಕ್ಟರ್ ಆಗಿದ್ದರು. ದಿ| ಸೀತಾರಾಮ- ದಿ| ಲೀಲಾವತಿ ದಂಪತಿ ಪುತ್ರನಾದ ಇವರು ಪತ್ನಿ ಸಜಿನ, ಮಕ್ಕಳಾದ ಶರಣ್, ಅರ್ಜುನ್, ಸಹೋದರ ರಾದ ಅಶೋಕ್, ಸಹೋದರಿಯ ರಾದ ರಜನಿ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು …

ಮೀಪುಗುರಿ ತಿರುವಿನಲ್ಲಿ ಕಟ್ಟಿ ನಿಂತ ನೀರು: ಸಂಚಾರ ಸಮಸ್ಯೆ

ಕಾಸರಗೋಡು: ಕರಂದಕ್ಕಾಡು- ಮಧೂರು ರಸ್ತೆಯ ಮೀಪುಗುರಿ ತಿರುವಲ್ಲಿ ನೀರು ಸಂಗ್ರಹಗೊಂಡು ವಾಹನಗಳ ಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಲಾಗಿದೆ. ಇಲ್ಲಿ ಚರಂಡಿ ಇದ್ದರೂ ಮಣ್ಣು ಕಸಕಡ್ಡಿ ತುಂಬಿಕೊಂಡು ಶುಚಿಗೊಳಿಸದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ಇಲ್ಲಿ ನೀರು ಕಟ್ಟಿ ನಿಲ್ಲಲು ಕಾರಣವೆನ್ನಲಾಗಿದೆ. ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಈಗ ಸಾರ್ವಜನಿಕರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ವಾಹನಗಳು ಸಂಚರಿಸುವಾಗ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ಅಪಘಾತ ಭೀತಿ …

ವಿವಿಧೆಡೆಗಳಲ್ಲಿ ತ್ಯಾಜ್ಯ ಉಪೇಕ್ಷಿಸಿದವರಿಂದ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ದಂಡ ವಸೂಲಿ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಯ ಅಧೀನದಲ್ಲಿರುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ವಿವಿಧ ಕಡೆಗಳಲ್ಲಿ ನಡೆಸಿದ ತಪಾ ಸಣೆಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಕಾನೂನು ಉಲ್ಲಂಘನೆ ಗಳನ್ನು ಪತ್ತೆಹಚ್ಚಿ ದಂಡ ವಿಧಿಸಿದೆ. ತ್ಯಾಜ್ಯಗಳನ್ನು ಉಪೇಕ್ಷಿಸುವ, ಉರಿಸುವ, ತೋಡಿಗೆಸೆಯುವ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೊಳವೆ ಬಾವಿಗಳು ಹೆಚ್ಚಾಗಿ ಉಪಯೋಗಿಸುತ್ತಿರುವ ಕಾರಣ ಪಾಳು ಬಾವಿಗಳಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಬಾವಿಗಳಲ್ಲಿ ತ್ಯಾಜ್ಯ ಉಪೇಕ್ಷಿಸಿದ ಮುಳಿಯಾರಿನ ಕ್ವಾರ್ಟರ್ಸ್, ಚಟ್ಟಂಚಾಲ್‌ನ ಕ್ವಾರ್ಟರ್ಸ್, ಪೇರಾಲ್‌ನ ಕ್ವಾರ್ಟರ್ಸ್ ಎಂಬೆಡೆಗಳ ಲ್ಲಿನ ಮಾಲಕರಿಗೆ 11೦೦ ರೂ. ದಂಡ ಹೇರಲಾಗಿದೆ. …

ಮುಳಿಯಾರು ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಧನ

ಮುಳಿಯಾರು:  ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಂದಡ್ಕ ಮಾಯಿಲಂ ಕೋಟೆ ನಿವಾಸಿ ಕೂಕಲ್ ನಾರಾಯಣನ್ ನಾಯರ್ (70) ನಿಧನ ಹೊಂದಿದರು. ಮೃತರು ಪತ್ನಿ ಕೋಡೋತ್ ತಂಗಮಣಿ, ಮಕ್ಕಳಾದ ಶ್ರೀನ, ಡಾ| ಶ್ರುತಿ, ಶ್ರೀನಾಥ್, ಅಳಿಯಂದಿರಾದ ಶ್ರೀನಿವಾಸನ್ ಪರಪ್ಪ, ಅರ್ಜುನ್ ಕಾಞಂಗಾಡ್, ಸೊಸೆ ಶ್ವೇತ, ಸಹೋದರರಾದ ಕೂಕಲ್ ಕುಂಞಿಕಣ್ಣನ್ ನಾಯರ್, ಕೂಕಲ್ ರಾಘವನ್ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಬ್ಡಾಜೆ: ಮೈತ್ರಿ ಗ್ರಂಥಾಲಯಕ್ಕೆ ಭೂಮಿ ಆಡಳಿತ ಪಕ್ಷದ ಒತ್ತಾಸೆ- ಬಿಜೆಪಿ ಆರೋಪ

ಬದಿಯಡ್ಕ: ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್‌ಟಾಪ್ ನೀಡುವು ದಾಗಿ ಭರವಸೆಯೊಡ್ಡಿ 250ಕ್ಕಿಂತಲೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿದ ಮಾರ್ಪನಡ್ಕದ ಮೈತ್ರಿ ಗ್ರಂಥಾಲಯಕ್ಕೆ ಭೂಮಿ ಹಂಚಿಕೆ ಬಗ್ಗೆ ಕುಂಬ್ಡಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಸೇರಿಸಿರುವುದು ಆಡಳಿತ ಒಕ್ಕೂಟವಾದ ಯುಡಿಎಫ್   ಪಂಚಾಯತ್‌ನ  ಜನತೆಯನ್ನು ವಂಚಿಸುವ ಹುನ್ನಾರ ವಾಗಿದೆಯೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆರೋಪಿಸಿದೆ. ಇದೀಗ ಮೈತ್ರಿ ಗ್ರಂಥಾಲಯದ ಹೆಸರು ಬದಲಾವಣೆ ಮಾಡಿ ಮೈತ್ರಿ ಸೇವಾ ಸಂಘ ಎಂಬುದಾಗಿ ಮರು ನಾಮಕರಣ ಮಾಡಿರುವುದು ಆಡಳಿತ ಒಕ್ಕೂಟದ …

ರಹಸ್ಯ ಕ್ಯಾಮರಾ ಇರಿಸಿ ನಗ್ನ ದೃಶ್ಯ ಚಿತ್ರೀಕರಿಸಿದ ಪೊಲೀಸ್ ಸೆರೆ

ಇಡುಕ್ಕಿ: ಮಹಿಳಾ ಪೊಲೀಸ್ ಬಟ್ಟೆ ಬದಲಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಚಿತ್ರೀಕರಿಸಿ ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಯೊಡ್ಡಿದ ಪೊಲೀಸ್ ಸೆರೆಯಾಗಿದ್ದಾನೆ. ಇಡುಕ್ಕಿ ವಂಡಿಪರಿ ಯಾರ್ ಪೊಲೀಸ್ ಠಾಣೆಯ ವೈಶಾಖ್ ಸೆರೆಯಾದ ವ್ಯಕ್ತಿ. ರಹಸ್ಯ ಕ್ಯಾಮರಾದಲ್ಲಿ ದಾಖಲಾದ ನಗ್ನ ದೃಶ್ಯಗಳನ್ನು ತೋರಿಸಿ ವೈಶಾಖ್ ಬೆದರಿ ಸಿರುವುದಾಗಿ ಮಹಿಳಾ ಪೊಲೀಸ್ ಇಡುಕ್ಕಿ ವನಿತಾ ಸೆಲ್‌ಗೆ ದೂರು ನೀಡಿದ್ದರು.

ಪಚ್ಚಂಬಳ ವಾರ್ಡ್ ಮಹಾತ್ಮಾಗಾಂಧಿ ಕುಟುಂಬ ಸಂಗಮ

ಮಂಗಲ್ಪಾಡಿ: ಮಂಗಲ್ಪಾಡಿ  ಪಂಚಾಯತ್ ಪಚ್ಚಂಬಳ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ, ಮಹಾತ್ಮಾಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಜರಗಿದ್ದು, ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್ ಉದ್ಘಾಟಿಸಿದರು. ಮುಖಂಡರಾದ ಬಾಬು ಬಂದ್ಯೋಡು, ಫರೂಕ್ ಶಿರಿಯ, ಮುಹಮ್ಮದ್ ಸೀಗಂದಡಿ, ರಾಜೇಶ್ ನಾಯ್ಕ್, ಮುಹಮ್ಮದ್ ಮಲಂದೂರು ಉಪಸ್ಥಿತರಿದ್ದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಭುಜಂಗ ಶೆಟ್ಟಿ, ಉಪಾಧ್ಯಕ್ಷರಾಗಿ ಐ.ಜಿ. ತಿಗ್ನೇಶ್ ಮ್ಯಾಥ್ಯು, ಅಬ್ದುಲ್ ಅಸೀಸ್, ಪ್ರಧಾನ ಕಾರ್ಯದರ್ಶಿಯಾಗಿ ಐ.ಪಿ. ಸೈನುದ್ದೀನ್, ಜೊತೆ ಕಾರ್ಯದರ್ಶಿಗಳಾಗಿ ಮೂಸಾ ಮಿಲಿಟರಿ, ಮುಹಮ್ಮದಲಿ, ಯೂಸಫ್ …

ಅಡೂರಿನಲ್ಲಿ ದೈವಕಲಾವಿದನ ಸಾವು ಕೊಲೆ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ; ಕುತ್ತಿಗೆ ಎಲುಬು ಮುರಿದಿರುವುದೇ ಸಾವಿಗೆ ಕಾರಣ-ಮರಣೋತ್ತರ ಪರೀಕ್ಷಾ ವರದಿ

ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು  ಉರುಡೂರಿನಲ್ಲಿ ದೈವ ಕಲಾವಿದನ  ಸಾವು ಕೊಲೆ ಕೃತ್ಯವಾಗಿದೆಯೆಂದು ಸ್ಪಷ್ಟಗೊಂಡಿದೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ ದೊಳಗೆ ಆರೋಪಿಯ ಬಂಧನ ದಾಖಲಿಸಲಾಗುವುದೆಂದು ಸೂಚನೆಯಿದೆ.  ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್‌ರ ಮೇಲ್ನೋಟ ದಲ್ಲಿ ಬೇಡಗಂ ಪೊಲೀಸ್ ಇನ್‌ಸ್ಪೆ ಕ್ಟರ್ ರಾಜೀವನ್ ವಲಿಯವಳಪ್ಪಿಲ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಉರುಡೂರು ಬಳಿಯ ಚಂದನ ಕ್ಕಾಡ್ ಎಂಬಲ್ಲಿನ ದೈವ ಕಲಾವಿದ ನಾದ ಟಿ. ಸತೀಶನ್ ಯಾನೆ ಬಿಜು (46) ಎಂಬವರು  …

ಕೋವಿಡ್ ಕೇಸು ಹೆಚ್ಚಳ: ಪ್ರಧಾನಿ ಭೇಟಿಯಾಗುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ

ನವದೆಹಲಿ: ದೇಶದಲ್ಲಿ ಸಕ್ರಿಯ ಕೋವಿಡ್ -೧೯ ಪ್ರಕರಣಗಳು ಇಂದು 7000 ದಾಟಿರುವುದರಿಂದ ಪ್ರಧಾನ ಮಂತ್ರಿಯನ್ನು ಭೇಟಿಯಾಗುವ ಸಚಿವರೂ ಸೇರಿದಂತೆ ಎಲ್ಲರಿಗೂ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 306 ಹೊಸ ಕೋವಿಡ್ ಪ್ರಕರಣಗಳು ಮತ್ತು ೬ ಸಾವುಗಳು ನಡೆದಿದೆ ಎಂದು ತಿಳಿಸಲಾಗಿದೆ. ಇದರಲ್ಲಿ ಮೂರು ಸಾವು ಕೇರಳದಲ್ಲಿ ನಡೆದಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದೇ ಅವದಿ ಯಲ್ಲಿ ತಲಾ 1ರಂತೆ ಸಾವು ಸಂಭವಿಸಿದೆ. …

ಬಾಲಕಿಗೆ ಲೈಂಗಿಕ ಕಿರುಕುಳ: ಯುವಕ ಸೆರೆ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಯಾಗಿರುವ ಯುವಕನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆಂಗಳ ಸಂತೋಷ್‌ನಗರದ ಮೊಹಮ್ಮದ್ ಅಜ್ಮಲ್ (24) ಬಂಧಿತ ಆರೋಪಿ. ವಿದ್ಯಾನಗರ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 17ರ ಹರೆಯದ ಬಾಲಕಿಗೆ ಪ್ರೀತಿಯ ಹೆಸರಲ್ಲಿ ನಾಲ್ಕು ತಿಂಗಳ ಹಿಂದೆ ಲೈಂಗಿಕ ಕಿರುಕುಳ ನೀಡಿ ಅದರ ಪರಿಣಾಮ ಆಕೆ ಗರ್ಭಿಣಿ ಯಾಗಿ ರುವುದಾಗಿ ಆರೋಪಿಸಿ ಆ ಬಾಲಕಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ವಿದ್ಯಾನಗರ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿ …