ರಾಜ್ಯದಲ್ಲಿ ಮಳೆ ಮುಂದುವರಿಕೆ

xತಿರುವನಂತಪುರ: ರಾಜ್ಯದಲ್ಲಿ ಇನ್ನೂ ಐದು ದಿನಗಳ ತನಕ ಮಳೆ ಮುಂದುವರಿಯಲಿದೆಯೆಂದು  ಕೇಂದ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಪತ್ತನಂತಿಟ್ಟ, ಇಡುಕ್ಕಿ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಆದ್ದರಿಂದ ಈ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಹೊರತಾಗಿ ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಅದರ ಪ್ರಭಾವದಿಂದಾಗಿ ರಾಜ್ಯದಲ್ಲಿ  ಕೆಲವು ದಿನಗಳ ತನಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದು ಕಡಲ್ಕೊರೆತಕ್ಕೂ ದಾರಿ ಮಾಡಿಕೊ ಡಲಿದೆಯೆಂದು ಇಲಾಖೆ ಹೇಳಿದೆ.

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಧರ್ಮತ್ತಡ್ಕ ಶಾಲೆಯಲ್ಲಿ ಸ್ಪರ್ಧೆ ಆರಂಭ

ಪೆರ್ಮುದೆ: ಮಂಜೇಶ್ವರ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವ ಇಂದಿನಿಂದ ೧೦ರ ತನಕ ಧರ್ಮತ್ತಡ್ಕ ಎಸ್‌ಡಿಪಿಎಎಚ್‌ಎಸ್‌ಎಸ್, ಎಯುಪಿಎಸ್ ಶಾಲೆಯಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ಎನ್. ಶಾರದ ಅಮ್ಮ ಧ್ವಜಾರೋಹಣಗೈಯ್ಯುವರು. ೧೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಡಿ. ಅಧ್ಯಕ್ಷತೆ ವಹಿಸುವರು. ಎಇಒ ಜಿತೇಂದ್ರ ಎಸ್.ಎಚ್. ಪ್ರಸ್ತಾಪಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿರುವರು. ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಡಿಡಿಇ ನಂದಿ ಕೇಶನ್ …

ವಿದ್ಯುತ್ ದರ ಹೆಚ್ಚಳ: ಕುಂಬಳೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕುಂಬಳೆ: ಬೆಲೆ ಏರಿಕೆ, ಸರಕಾರದ ದುಂದು ವೆಚ್ಚದಿಂದ ಬೆನ್ನೆಲುಬು ತುಂಡಾದ ಕೇರಳೀಯರ ಜನತೆಗೆ ಇನ್ನೊಂದು ಹೊಡೆತವಾ ಗಿದೆ ವಿದ್ಯುತ್ ದರ ಹೆಚ್ಚಳದ ಮೂಲಕ ಸರಕಾರ ನೀಡಿರುವುದೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಆರೋಪಿಸಿದರು. ಬ್ಲೋಕ್ ಕಾಂಗ್ರೆಸ್ ಸಮಿತಿ, ಕುಂಬಳೆ ಕೆಎಸ್‌ಇಬಿ ಸೆಕ್ಷನ್ ಕಚೇರಿಗೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೃಹತ್ ಮೊತ್ತ ಬಾಕಿ ಉಳಿಸಿಕೊಂಡವರಿಂದ ಸಂಗ್ರಹಿಸಲು ಹೆದರುವ ಕೆಎಸ್‌ಇಬಿ ಸರಕಾರ ಜನರಿಗೆ ಹೆಚ್ಚು ಭಾರ ಹೊರಿಸಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. …

ಕೆ.ಎಸ್.ಎಸ್.ಪಿ.ಯುನಿಂದ ಮಂಜೇಶ್ವರ ಬ್ಲೋಕ್ ಪಂ. ಕಚೇರಿ ಪರಿಸರದಲ್ಲಿ ಸತ್ಯಾಗ್ರಹ ನಾಳೆ

ಉಪ್ಪಳ: ಕೇರಳ ಸ್ಟೇಟ್ ಪೆನ್ಯ ನರ್ಸ್ ಯೂನಿಯನ್ (ಕೆ.ಎಸ್.ಎಸ್.ಪಿ.ಯು) ರಾಜ್ಯ ಸಮಿತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ನಾಳೆ ಬೆಳಿಗ್ಗೆ 11ರಿಂದ ಸಂಜೆ 5ರ ತನಕ ಸೆಕ್ರೇಟರಿಯೇಟ್ ಮುಂದೆ ನಡೆಸುವ ಸತ್ಯಾಗ್ರಹದ ಅಂಗವಾಗಿ ಎಲ್ಲಾ ಬ್ಲೋಕ್ ಕೇಂದ್ರಗಳಲ್ಲಿಯೂ ಬೆಳಿಗ್ಗೆ 10ರಿಂದ ಕೆ.ಎಸ್.ಎಸ್.ಪಿ.ಯು ಸದಸ್ಯರಿಂದ ಸತ್ಯಾಗ್ರಹ ನಡೆಯಲಿದೆ. ಮಂಜೇಶ್ವರ ಬ್ಲೋಕ್ ಕಮಿಟಿಯ ಆಶ್ರಯದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿ ಸಮೀಪದಲ್ಲಿ ಸತ್ಯಾಗ್ರಹ ನಡೆಯಲಿದ್ದು, ಎಲ್ಲಾ ಪಿಂಚಿಣಿದಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕೆಂದು ಬ್ಲೋಕ್ ಕಮಿಟಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಕೊಂಡೆವೂರು ವಿದ್ಯಾಪೀಠ ಶಿಶುವಾಟಿಕಾಕ್ಕೆ ಕಲಿಕೋಪಕರಣಗಳ ನೀಡಿಕೆ

ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಶಿಶುವಾಟಿಕಾ ವಿಭಾಗದ ಚಿಣ್ಣರಿಗಾಗಿ ವಿವಿಧ ರೀತಿಯ ಸರಳ ಕಲಿಕೋಪಕ ರಣಗಳನ್ನು ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ವತಿಯಿಂದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಸದಸ್ಯೆ ಹಾಗೂ ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ಗೌರವಾಧ್ಯಕ್ಷೆ ಜಯಲಕ್ಷಿö್ಮÃ ಕಾರಂತ್, ಶಾಲಾ ಪ್ರಾಂಶುಪಾಲ ಪ್ರವಿಧ್ ಮತ್ತು ಸಂಘದ ಕಾರ್ಯದರ್ಶಿ ತಾರಾಲತಾ ಉಪಸ್ಥಿತರಿದ್ದರು.

ಉರ್ದು ರಾಷ್ಟ್ರೀಯ ವಿಚಾರಗೋಷ್ಠಿ ಉಪ್ಪಳದಲ್ಲಿ ೯ರಂದು

ಉಪ್ಪಳ: ಉರ್ದು ದಿನಾಚರಣೆ ಹಾಗೂ ದೇಶೀಯ ವಿಚಾರಗೋಷ್ಠಿ ಈ ತಿಂಗಳ ೯ರಂದು ಉಪ್ಪಳ ಓಲ್ಡ್ ಹಿಂದೂಸ್ಥಾನಿ ಶಾಲೆಯಲ್ಲಿ ನಡೆಯಲಿದೆ. ಕಣ್ಣೂರು ವಿವಿಯ ಬಹುಭಾಷಾ ಅಧ್ಯಯನ ಕೇಂದ್ರ, ಹನಫಿ ವೆಲ್‌ಫೇರ್ ಸೊಸೈಟಿ, ಕೆ.ಟಿ.ಎಂ.ಎ ಎಂಬಿವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿವಿಯ ಸಿಂಡಿಕೇಟ್ ಸದಸ್ಯ ಡಾ. ಎ. ಅಶೋಕನ್ ಅದ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್, ಡಾ. ಎ.ಎಂ ಶ್ರೀಧರನ್, ನಿಸಾರ್ ಅಹಮ್ಮದ್, ಡಾ. ಹಸನ್ ಶಿಹಾಬ್ ಹುದವಿ, ನಾಸರ್, ಅಬ್ದುಲ್ ರಶೀದ್, …

ಬಿಎಂಎಸ್ ಕುಂಬಳೆ ವಲಯ ಸಮಿತಿಯಿಂದ ಪಂಚಾಯತ್ ಧರಣಿ

ಉಪ್ಪಳ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯವ್ಯಾಪಕವಾಗಿ ಬಿಎಂಎಸ್ ನಡೆಸುವ ಮುಷ್ಕರದ ಅಂಗವಾಗಿ ಈ ತಿಂಗಳ ೧೫ರಂದು ಕುಂಬಳೆ, ಪುತ್ತಿಗೆ, ೧೭ರಂದು ಮಂಗಲ್ಪಾಡಿ, ಪೈವಳಿಕೆ ಪಂ. ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಿಎಂಎಸ್ ಕುಂಬಳೆ ವಲಯ ಸಭೆ ಕುಂಬಳೆ ಜಯಮಾರುತಿ ವ್ಯಾಯಾಮಶಾಲೆಯಲ್ಲಿ ನಡೆದಿದ್ದು, ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ಸುರೇಶ್ ದೇಳಿ ಮಾತನಾಡಿದರು. ಶಿವಾನಂದ ರಾವ್ ಸ್ವಾಗತಿಸಿ, ಶಶಿಧರ ವಂದಿಸಿದರು.

ಅಗತ್ಯದ ನೌಕರರಿಲ್ಲ: ಬದಿಯಡ್ಕ ಪಂ. ಕಚೇರಿಗೆ ಬೀಗ ಹಾಕಿದ ಆಡಳಿತ ಸಮಿತಿ

ಬದಿಯಡ್ಕ: ಅತ್ಯಗತ್ಯಕ್ಕೂ ನೌಕರರ ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ಬದಿಯಡ್ಕ ಪಂಚಾಯತ್ ಕಚೇರಿಯನ್ನು ಪಂ. ಅಧ್ಯಕ್ಷೆಯ ನೇತೃತ್ವದಲ್ಲಿ ಬೀಗ ಜಡಿದು ಮುಚ್ಚಲಾಗಿದೆ. ೩೮೦ರಷ್ಟು ಅಭಿವೃದ್ಧಿ ಯೋಜನೆಗಳು ಇಂಜಿನಿಯರ್‌ನ ಕೊರತೆಯಿಂದಾಗಿ ಹಲವು ಕಾಲದಿಂದ ಮೊಟಕುಗೊಂಡಿರುವು ದಾಗಿ ಪಂ. ಅಧ್ಯಕ್ಷೆ ಹಾಗೂ ಸದಸ್ಯರು ನುಡಿದರು. ಇದರ ಹೊರತಾಗಿ ಎರಡು ಸೀನಿಯರ್ ಕ್ಲಾರ್ಕ್‌ಗಳ  ಹಾಗೂ ಓರ್ವ ಅಕೌಂಟೆಂಟ್‌ನ ಹುದ್ದೆ ಖಾಲಿ ಇದೆ. ಇದು ಪಂಚಾಯತ್‌ನ ದೈನಂದಿನ ಚಟುವಟಿ ಕೆಯನ್ನು ಸ್ತಬ್ದಗೊಳಿಸಿದೆಯೆಂದು ಆರೋಪಿಸಿ ಅಧ್ಯಕ್ಷೆ ಬಿ. ಶಾಂತಾ, ಉಪಾಧ್ಯಕ್ಷ ಎಂ. ಅಬ್ಬಾಸ್ ಎಂಬಿವರ ನೇತೃತ್ವದಲ್ಲಿ  …

ಪೈವಳಿಕೆ ಸಹಕಾರಿ ಬ್ಯಾಂಕ್‌ನಲ್ಲಿ ಸಿಪಿಐ- ಬಿಜೆಪಿ ಮೈತ್ರಿ ಕೂಟಕ್ಕೆ ಜಯ: ಸಿಪಿಎಂಗೆ ನಷ್ಟ

ಪೈವಳಿಕೆ: ಸಿಪಿಎಂ -ಸಿಪಿಐಯ ಹಠಮಾರಿತನ ಪೈವಳಿಕೆಯಲ್ಲಿ ಸಿಪಿಎಂಗೆ ಹಾನಿ ಸೃಷ್ಟಿಸಿದೆ. ಶನಿವಾರ ನಡೆದ ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸಿಪಿಐ- ಬಿಜೆಪಿ ಮೈತ್ರಿಕೂಟ ಅಭ್ಯರ್ಥಿಗಳು ಎಂಟು ಸ್ಥಾನದಲ್ಲಿ ಜಯ ಗಳಿಸಿದ್ದಾರೆ. ಮುಸ್ಲಿಂಲೀಗ್‌ಗೆ ಎರಡು, ಕಾಂಗ್ರೆಸ್‌ಗೆ ಒಂದು ಸೀಟು ಲಭಿಸಿದೆ. ಆದರೆ ಸಿಪಿಎಂ ಅಭ್ಯರ್ಥಿಗಳು ಎಲ್ಲರೂ ಸೋಲನುಭವಿಸಿದರು. ೧೧ ಮಂದಿ ಆಡಳಿತ ಸಮಿತಿ ಸದಸ್ಯರಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಸಿಪಿಐಗೆ ನಾಲ್ಕು, ಸಿಪಿಎಂಗೆ ಎರಡು ಸ್ಥಾನ ಲಭಿಸಿತ್ತು. ಬಳಿಕ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಎಂ. ಯುಡಿಎಫ್‌ಗೆ ಬೆಂಬಲ …

ಸನಾತನ ಧರ್ಮದ ವಿರುದ್ಧ ಹೇಳಿಕೆಪ್ರಕರಣ ದಾಖಲಿಸದ ತಮಿಳುನಾಡು ಪೊಲೀಸರ ನಿಲುವಿಗೆ ಹೈಕೋರ್ಟ್ ಚಾಟಿ

ಚೆನ್ನೈ       : ಸನಾತನ ಧರ್ಮವು ಡೆಂಗ್ಯೂ, ಮಲೇರಿಯ ಇದ್ದಂತೆ. ಆದ್ದರಿಂದ ಸನಾತನ ಧರ್ಮವನ್ನು ಕೇವಲ  ವಿರೋಧ ಮಾಡುವುದಷ್ಟೇ ಮಾತ್ರವಲ್ಲ, ಅದನ್ನು ನಿರ್ಮೂಲನೆ  ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ರ ಪುತ್ರ ಹಾಗೂ ಸಚಿವರಾಗಿರುವ ಉದಯನಿಧಿ ಸ್ಟಾಲಿನ್   ನೀಡಿರುವ ಹೇಳಿಕೆ  ಮತೀಯ ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ರೀತಿಯ ದ್ದಾಗಿದೆಯೆಂದೂ, ಆದ್ದರಿಂದ  ಆ ಬಗ್ಗೆ ಪೊಲೀಸರು ಇನ್ನೂ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲವೆಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರನ್ನು ಪ್ರಶ್ನಿಸಿದೆ. ಚೆನ್ನೈಯಲ್ಲಿ ಸೆ. ೨ರಂದು ನಡೆದ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ …