ಸುಪರ್ ಮಾರ್ಕೆಟ್ ಮಾಲಕ  ನಿಧನ

ಉಪ್ಪಳ: ಮಣಿಮುಂಡ ನಿವಾ ಸಿಯೂ ಸೂಪರ್ ಮಾರ್ಕೆಟ್ ಮಾಲಕರಾದ ಜುಲ್ಫಿಕರ್ ಮುಹ ಮ್ಮದ್ ಶರೀಫ್ ಬಸ್ತಾನಿ  (೬೧) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೈಮೂನ, ಮಕ್ಕಳಾದ ಆಯಿಶ, ಮುನಾಸ್, ರಹಮ್ಮತ್ ನಾಸ್ಮಿ, ಅಳಿಯಂದಿರಾದ ತೌಫೀರ್, ರಿಯಾಸ್, ಸಹೋದರ- ಸಹೋದರಿಯರಾದ ಸಿಕಂದರ್, ಹಸನ್, ಬೀಫಾತಿಮ, ಜೈಬುನ್ನಿಸಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಸ್ತಿ ವಿವಾದ: ಸಹೋದರ ಪುತ್ರಿಯನ್ನು ಇರಿದ ಪ್ರಕರಣದ ಆರೋಪಿಗೆ ೪ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕುಟುಂಬ ಆಸ್ತಿ ಪಾಲು ಮಾಡಿಕೊಡುವ ವಿಷಯದಲ್ಲಿ ಉಂಟಾದ ವಿವಾದದಿಂದ ಅಣ್ಣನ ಮಗಳನ್ನು  ಚಾಕುವಿನಿಂದ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨)ದ ನ್ಯಾಯಾಧೀಶರಾದ ಬಿಜು ಟಿ. ಅವರು ನಾಲ್ಕು ವರ್ಷ ಸಜೆ ಮತ್ತು ೬೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೇಡಡ್ಕ ಕುಂಡಂಕುಳಿ ಕಾರೊಟ್ಟಿಪ್ಪಾರದ ಲೋಹಿತಾಕ್ಷನ್ (೪೬) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ, ಆರೋಪಿ ೧೪ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. …

ಸಿಡಿಲು ಬಡಿದು ತೆಂಗಿನ ಮರ, ಮನೆಗೆ ಹಾನಿ: ಮನೆಯವರು ಅಪಾಯದಿಂದ ಪಾರು

ಉಪ್ಪಳ: ಸಿಡಿಲು ಬಡಿದು ವಿವಿಧೆಡೆ ತೆಂಗಿನ ಮರಗಳು, ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಿನ್ನೆ ರಾತ್ರಿ ಸುಮಾರು ೮.೩೦ರ ವೇಳೆ ನಡೆದಿದೆ. ಅಂಬಾರು ಕೃಷ್ಣನಗರ ನಿವಾಸಿ ಮೊಹಮ್ಮದಲಿ ಎಂಬವರ ತೆಂಗಿನ ಮರಕ್ಕೆ ಸಿಡಿಲೆರಗಿದೆ. ಇದರಿಂದ ತೆಂಗಿನಮರ ಉರಿದಿದೆ. ಇದೇ ವೇಳೆ ಒಳಗಡೆಯಿದ್ದ ಪತ್ನಿ ನಜೀಮರ ಕೈಗೆ ಶಾಕ್ ತಗಲಿದ ಅನುಭವ ಉಂಟಾಗಿದ್ದು, ಕುಸಿದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ವಯರಿಂಗ್ ಹಾನಿಗೊಂಡಿದ್ದು, ಕಾಂಕ್ರೀಟ್ ಮನೆಯ ಎದುರು ಭಾಗದ ಗೋಡೆ ಬಿರುಕು ಬಿಟ್ಟಿರುವುದಾಗಿ ಮೊಹಮ್ಮದಾಲಿ …

ಜಿಲ್ಲಾ ಕೇರಳೋತ್ಸವ: ಅತ್ಲೆಟಿಕ್ ಮೀಟ್‌ನಲ್ಲಿ ಕಾರಡ್ಕ ಬ್ಲೋಕ್ ಚಾಂಪ್ಯನ್

ಕಾಸರಗೋಡು: ನೀಲೇಶ್ವರ ಇ.ಎಂ.ಎಸ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕೇರಳೋತ್ಸವದ ಅತ್ಲೆಟಿಕ್ ಮೀಟ್‌ನಲ್ಲಿ ೧೬೪ ಅಂಕ ಪಡೆದು ಕಾರಡ್ಕ ಬ್ಲೋಕ್ ಪಂ. ಓವರೋಲ್ ಚಾಂಪ್ಯನ್ ಆಗಿದೆ. ೮೫ ಅಂಕ ಗಳಿಸಿದ ಮಂಜೇಶ್ವರ ಬ್ಲೋಕ್ ದ್ವಿತೀಯ ಸ್ಥಾನ ಪಡೆದಿದ್ದು, ೬೯ ಅಂಕದೊಂದಿಗೆ ಕಾಞಂಗಾಡ್ ಬ್ಲೋಕ್ ತೃತೀಯ ಸ್ಥಾನ ಗಳಿಸಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ದರು. ಜಿಲ್ಲಾ ಪಂ. ಸದಸ್ಯ ಸಿ.ಜೆ. ಸಜಿತ್ ಅಧ್ಯಕ್ಷತೆ ವಹಿಸದರು. ನೀಲೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಮಾಧವನ್ ಮಣಿಯಾರ, ಜಿಲ್ಲಾ …

ಗಣಿತ ಮೇಳದಲ್ಲಿ ಧರ್ಮತ್ತಡ್ಕ ಶಾಲೆ ಚಾಂಪ್ಯನ್

ಮಂಜೇಶ್ವರ: ಕುಂಜತ್ತೂರು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸ ವದ ಪ್ರೌಢಶಾಲಾ ವಿಭಾಗದ ಗಣಿತ ಮೇಳದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಚಾಂಪಿಯನ್‌ಶಿಪ್ ಪಡೆದುಕೊಂಡಿದೆ. ಒಟ್ಟು ೯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ೧ರಲ್ಲಿ ದ್ವಿತೀಯ  ಹಾಗೂ ೨ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದು ಸ್ಪರ್ಧಾಳುಗಳು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡರು. ನಂಬರ್ ಚಾರ್ಟ್ ವಿಭಾಗದಲ್ಲಿ ಮನೋಜ್ಞ ಸಿ.ಎಚ್ ಪ್ರಥಮ, ಜಿಯೋಮೆಟ್ರಿಕಲ್ ಚಾರ್ಟ್ ವಿಭಾಗದಲ್ಲಿ ಡಾನಿಕಾ ಪಹಲ್ ಆರ್ ಪ್ರಥಮ, ಅದರ್  ಚಾರ್ಟ್ ವಿಭಾಗದಲ್ಲಿ …

ಅನಧಿಕೃತ ಅಂಗಡಿ ತೆರವಿಗೆ ಕುಂಬಳೆ ಬಿಜೆಪಿ ಆಗ್ರಹ:  ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಕುಂಬಳೆ: ಪೇಟೆಯ ಹೃದಯ ಭಾಗದಲ್ಲಿ ಕುಂಬಳೆ ಪಂಚಾಯತ್  ಕಟ್ಟಡದ ವಾರ್ಡ್ ೨೩/೬೧೪ರಲ್ಲಿ ಕಾರ್ಯಾಚರಿಸುತ್ತಿರುವ ಹಣ್ಣು ಹಂಪಲು ಹಾಗೂ ತಂಪು ಪಾನೀಯದ ಅಂಗಡಿಯನ್ನು ಕುಂಬಳೆ ಪಂ.ನ ಅನುಮತಿ ಪಡೆಯದೆ ನವೀಕರಿಸಲಾಗುತ್ತಿದೆ. ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ  ಈ ಅಂಗಡಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಂಚಾಯತ್ ಸಮಿತಿ ಲಿಖಿತವಾಗಿ ಪಂಚಾಯತ್ ಕಾರ್ಯನಿರ್ವ ಹಣಾಧಿಕಾರಿಗೆ ದೂರು ನೀಡಿದೆ. ಅನಧಿಕೃತ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಪಂಚಾಯತ್ ಸಮಿತಿ ತಿಳಿಸಿದೆ. ಈ ಕುರಿತು ಕುಂಬಳೆ …

ಮುಳ್ಳೇರಿಯ-ಎಡಪರಂಬ ಮಲೆನಾಡು ಹೆದ್ದಾರಿ ನಿರ್ಮಾಣ ಆರಂಭ: ಲೋಪದೋಷ ನಿವಾರಿಸಬೇಕೆಂದು ಸಚಿವರಿಗೆ ಮನವಿ

ಮುಳ್ಳೇರಿಯ: ಮಲೆನಾಡು ಹೆದ್ದಾರಿಯನ್ನು ದೂರದೃಷ್ಟಿಯೊಂ ದಿಗೂ, ಲೋಪವಿಲ್ಲದ ರೀತಿಯಲ್ಲಿ ನಿರ್ಮಿಸಬೇಕೆಂದು ಸಮಾಜ ಸೇವಕ ಮುಳ್ಳೇರಿಯ ನಿವಾಸಿ ಬಾಲಕೃಷ್ಣ ರೈ ಸಚಿವ ಮುಹಮ್ಮದ್ ರಿಯಾಸ್‌ಗೆ ಕಳುಹಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಮಲೆನಾಡು ಹೆದ್ದಾರಿಯ ಕಾಮಗಾರಿ ಈಗ ಮುಳ್ಳೇರಿಯದಿಂದ ಎಡಪರಂಬವರೆಗಿನ ರಸ್ತೆ ಕಾಮಗಾರಿ ಈಗ ಆರಂಭಿಸಲಾಗಿದೆ. ಕಿಫ್‌ಬಿಯ ೮೩.೮೫ ಕೋಟಿ ರೂ. ವೆಚ್ಚದಲ್ಲಿ ೧೦ ಕಿಲೋ ಮೀಟರ್ ದೂರದ ಈ ರಸ್ತೆಯನ್ನು ೯ ಮೀಟರ್ ಅಗಲದಲ್ಲಿ ನಿರ್ಮಿಸುತ್ತಿರುವುದು  ಈಗ ಇರುವ ತಿರುವು, ಏರಿಳಿತಗಳನ್ನು ಅದೇ ರೀತಿ ಉಳಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆಯೆಂದು ಮನವಿಯಲ್ಲಿ …

ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಧರ್ಮತ್ತಡ್ಕ ಶಾಲೆಯಲ್ಲಿ ಭರದ ಸಿದ್ಧತೆ

ಉಪ್ಪಳ: ೬೨ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ ೭ರಿಂದ ೧೦ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಜರಗಲಿದ್ದು ಈ ಕುರಿತು ವಿವರಿಸಲು ಐಲ ಶಾರದಾ ಬೋವೀಸ್ ಶಾಲೆಯಲ್ಲಿ ಸಂಬಂಧಪಟ್ಟವರು ಪತ್ರಿಕಾಗೋಷ್ಠಿ ನಡೆಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಮಾತನಾಡಿ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ಕಲೋತ್ಸವದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿದೆ. ನಗರಪ್ರದೇಶದಿಂದ ದೂರವಿರುವ ಈ ಪ್ರದೇಶದಲ್ಲಿ ನಡೆ ಯುವ ಕಾರ್ಯಕ್ರಮ ಯಶಸ್ವಿಗೊಳ್ಳು ವಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿಸಿದರು. ಜನರಲ್ ಕನ್ವೀನರ್ …

ಮಂಜೇಶ್ವರ ಕ್ಷೇತ್ರದ ನವಕೇರಳ ವೇದಿಕೆ: ಮಹಿಳಾ ಸಂಗಮ

ಸೀತಾಂಗೋಳಿ: ನವಂಬರ್ ೧೮ರಂದು ಪೈವಳಿಕೆಯಲ್ಲಿ  ನಡೆಯುವ ಮಂಜೇಶ್ವರ ಕ್ಷೇತ್ರದ ನವಕೇರಳ ವೇದಿಕೆಯ ಪ್ರಚಾರಕ್ಕಾಗಿ ವನಿತಾ ಸಂಗಮ ಜರಗಿತು. ಪುತ್ತಿಗೆ ಪಂಚಾಯತ್‌ನಲ್ಲಿ ನಡೆದ ಮಹಿಳಾ ಸಂಗಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಇ.ಜಯಂತಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಾಲಾಕ್ಷ ರೈ, ಅನಿತಾ, ಅಬ್ದುಲ್ ಮಜೀದ್, ಪ್ರೇಮಾ ಎನ್ ರೈ, ಪಿ. ಇಬ್ರಾಹಿಂ, ಪಂಚಾಯತ್ ಕಾರ್ಯದರ್ಶಿ ರಾಜೇಶ್ವರಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಪಿ. ರಘುದೇವನ್ ಮಾಸ್ತರ್ …

ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿದ ಪ್ರಕರಣ: ಆರೋಪಿಗೆ ಸಜೆ, ದಂಡ

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಯನ್ನು ಚುಡಾಯಿಸಿ,  ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಎರಡು ವರ್ಷ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಕುಂಬಳೆ ಕೊಪಾಡಿ ನಿವಾಸಿ ಸಿ. ಸಾಗರ್ (೩೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಇದರ ಕುರಿತಾಗಿ ಆ ವಿದ್ಯಾರ್ಥಿನಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿದ …